ಉದಯವಾಹಿನಿ, ಕೋಲಾರ : ತಾಲ್ಲೂಕಿನ ವಕ್ಕಲೇರಿಯಲ್ಲಿ ಶ್ರೀಪಾರ್ವತಿ ಸಮೇತ ಮಾರ್ಕಂಡೇಶ್ವರಸ್ವಾಮಿಯ ೯೩ನೇ ವರ್ಷದ ಬ್ರಹ್ಮರಥೋತ್ಸವ ಫೆ.೧೨ರ ಬುಧವಾರ ನಡೆಯಲಿದೆ ಎಂದು ಆಗಮಿಕರಾದ ರವಿಶಂಕರದೀಕ್ಷಿತ್ ತಿಳಿಸಿದ್ದಾರೆ.
ಫೆ.೧೦ ರಂದು ಧ್ವಜಾರೋಹಣ ಉತ್ಸವದೊಂದಿಗೆ ಪೂಜಾ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ಫೆ.೧೧ ರಂದು ರಾತ್ರಿ ಗಿರಿಜಾಕಲ್ಯಾಣೋತ್ಸವ ನಡೆಯಲಿದೆ. ಫೆ.೧೨ ರಂದು ರಥೋತ್ಸವ ನಡೆಯಲಿದ್ದು, ಜಿಲ್ಲೆ ಹಾಗೂ ವಿವಿಧೆಡೆಗಳಿಂದ ಸಾವಿರಾರು ಮಂದಿಭಕ್ತರು ಪಾಲ್ಗೊಳ್ಳಲಿದ್ದಾರೆ.
ಫೆ.೧೩ ರಂದು ರಾತ್ರಿ ಪಾರ್ವಟೋತ್ಸವ ಹಾಗೂ ಫೆ.೧೪ ರಂದು ಇಡೀ ರಾಜ್ಯದಲ್ಲೇ ವಿಶಿಷ್ಟವೆನ್ನುವ ರೀತಿಯಲ್ಲಿ ವಕ್ಕಲೇರಿಯಲ್ಲಿ ರಾಕ್ಷಕ ರಾವಣನಿಗೂ ಉತ್ಸವ ನಡೆಯಲಿದ್ದು, ರಾವಣವಾಹನೋತ್ಸವ ಅತ್ಯಂತ ವೈಭವದಿಂದ ನಡೆಯಲಿದೆ. ಫೆ ೧೫ ರಂದು ಶಯನೋತ್ಸವ ನಡೆಯಲಿದ್ದು, ಸಹಸ್ರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ ಮತ್ತು ರಥೋತ್ಸವದಂದು ಸಾವಿರಾರು ಮಂದಿಗೆ ಅನ್ನದಾಸೋಹವೂ ನಡೆಯಲಿದೆ.
