ಉದಯವಾಹಿನಿ, ಮಂಗಳೂರು: ಇಂಡಿಯಾ ಪ್ಯಾಡಲ್ ಫೆಸ್ಟಿವಲ್ ಎರಡನೇ ಆವೃತ್ತಿ ಮಾರ್ಚ್ 7ರಿಂದ 9ರವರೆಗೆ ಸುರತ್ಕಲ್ ಬಳಿಯ ಸಸಿಹಿತ್ತು ಕಡಲತೀರದಲ್ಲಿ ನಡೆಯಲಿದೆ. ರಾಜ್ಯ ಪ್ರವಾಸೋದ್ಯಮ ಇಲಾಖೆಯ ಆಶ್ರಯದಲ್ಲಿ ಸರ್ಫಿಂಗ್ ಸ್ವಾಮಿ ಫೌಂಡೇಷನ್ ಆಯೋಜಿಸುವ ಸ್ಪರ್ಧೆಯಲ್ಲಿ ವಿಶ್ವದ ಪ್ರಮುಖ ಸ್ಟ್ಯಾಂಡ್ ಅಪ್ ಪ್ಯಾಡಲಿಂಗ್ (ಎಸ್‌ಯುಪಿ) ಪಟುಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಉತ್ಸವದಲ್ಲಿ ಎಲೈಟ್ ವಿಭಾಗದ ಸ್ಪರ್ಧೆಗಳು, ಗುಂಪು ರೇಸ್‌ಗಳು ಮತ್ತು ಕರ್ಯಾಗಾರಗಳು ನಡೆಯಲಿದ್ದು ವೃತ್ತಿಪರ ಅಥೀಟ್ಗಳ ಸ್ಪರ್ಧೆಗೆ ವೇದಿಕೆ ಸಿಗಲಿದೆ. ಪ್ಯಾಡಲರ್ಸ್ ಪ್ರೊಫೆಷನಲ್ಸ್ ಅಸೋಸಿಯೇಷನ್ (ಪಿಪಿಪಿ) ಟೂರ್‌ನಲ್ಲಿ ಮಿಂಚಿರುವ ಅಂತರರಾಷ್ಟ್ರೀಯ ಎಸ್‌ಯುಪಿ ಸ್ಪರ್ಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.
