ಉದಯವಾಹಿನಿ ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮೊದಲ ವಿಧಾನಸಭೆಯ ಅಧಿವೇಶನ ಜುಲೈ.3, 2023ರಿಂದ ಜುಲೈ.14, 2023ರವರೆಗೆ ನಡೆಸಲು ನಿಗದಿ ಪಡಿಸಲಾಗಿದೆ.ಇಂದು ಈ ಬಗ್ಗೆ ಅಧಿಕೃತ ಆದೇಶವನ್ನು ಪ್ರಕಟಿಸಿರುವಂತ ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ ವಿಶಾಲಾಕ್ಷಿ ಅವರು, ಕರ್ನಾಟಕ ವಿಧಾನಸಭೆಯು ಸೋಮವಾರ, ದಿನಾಂಕ 3ನೇ ಜುಲೈ 2023ರಂದು ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ವಿಧಾನಸೌಧದಲ್ಲಿರುವ ವಿಧಾನಸಭೆಯ ಸಭಾಂಗಣದಲ್ಲಿ ಸಭೆ ಸೇರಲಿದೆ ಎಂದಿದ್ದಾರೆ.16ನೇ ವಿಧಾನಸಭೆಯ ಒಂದನೇ ಅಧಿವೇಶನ ಮುಂದುವರೆದ ಉಪವೇಶನದ ಕಾರ್ಯಕಲಾಪಗಳನ್ನು ದಿನಾಂಕ 03-07-2023ರಿಂದ ದಿನಾಂಕ 14-07-2023ರವರೆಗೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ವಿಧಾನಸಭೆಯ ನಿಯಮ 42 ಮತ್ತು 45ರ ಅಡಿಯಲ್ಲಿ ಸಾರ್ವಜನಿಕರ ಹಿತದೃಷ್ಟಿಯ ಪ್ರಶ್ನೆಗಳು, ಸೂಚನೆಗಳನ್ನು ನೀಡಲು ಶಾಸಕರಿಗೆ ಅವಕಾಶವಿರುತ್ತದೆ ಎಂದಿದ್ದಾರೆ.ಶಾಸಕರು ಪ್ರಶ್ನಗಳ ಸೂಚನಾ ಪತ್ರಗಳನ್ನು ದಿನಾಂಕ 04-07-2023ರ ಸದನಕ್ಕೆ 16-06-2023ರಂದು ಸಲ್ಲಿಸಲು ಕೊನೆಯ ದಿನವಾಗಿದೆ. ಪ್ರಶ್ನೆಗಳ ಸೂಚನಾ ಪ್ರಶ್ನೆಗಳ ಸೂಚನಾ ಪತ್ರಗಳ ಬ್ಯಾಲೆಟ್ ನಡೆಸುವ ದಿನಾಂಕ 21-06-2023 ಆಗಿರುತ್ತದೆ ಎಂದಿದ್ದಾರೆ. ಇದೇ ರೀತಿ ಇತರೆ ದಿನಗಳಿಗೆ ಕೊನೆ ದಿನಾಂಕಗಳನ್ನು ನಿಗದಿ ಪಡಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!