ಉದಯವಾಹಿನಿ, ಹುಬ್ಬಳ್ಳಿ: ಅಧ್ಯಾತ್ಮ ತತ್ವಗಳನ್ನು ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳುವ ಸರಳ ಪಾಠಗಳನ್ನು ಬೋಧಿಸಿದ ಇಲ್ಲಿಯ ಪ್ರಸಿದ್ಧ ಶ್ರೀ ಸಿದ್ಧಾರೂಢ ಸ್ವಾಮಿಯವರ ಕಥಾಮೃತ ಗ್ರಂಥದ ಶತಮಾನೋತ್ಸವ ಅಂಗವಾಗಿ ನಗರದಲ್ಲಿ ಅದ್ದೂರಿ ಮೆರವಣಿಗೆಯ ಶೋಭಾಯಾತ್ರೆಯು ಜರುಗಿತು.

ಗಣೇಶ ಪೇಟೆಯ ಶ್ರೀ ಜಡಿಸಿದ್ಧಾಶ್ರಮದಿಂದ ಹೊರಟ ಮೆರವಣಿಗೆ ಮರಾಠಾಗಲ್ಲಿ, ಕೊಪ್ಪೀಕರ ರಸ್ತೆ, ಮಹಾನಗರ ಪಾಲಿಕೆ, ಉಪನಗರ ಪೆÇಲೀಸ್ ಠಾಣೆ, ದಾಜಿಬಾನ ಪೇಟೆ, ಮೈಸೂರು ಸ್ಟೋರ್ಸ್, ಸರಾಫ ಗಟ್ಟಿ, ಬಮ್ಮಾಪುರ ಓಣಿ, ನ್ಯೂ ಇಂಗ್ಲೀಷ್ ಸ್ಕೂಲ್, ಹಳೇ ಹುಬ್ಬಳ್ಳಿ ಶ್ರೀ ವೀರಭದ್ರೇಶ್ವರ ದೇವಸ್ಥಾನ, ಇಂಡಿಪಂಪ್ ವೃತ್ತಗಳಲ್ಲಿ ಹಾಯ್ದು ಮಧ್ಯಾಹ್ನದ ವೇಳೆಗೆ ಶ್ರೀಮಠ ತಲುಪಿತು. ಮೆರವಣಿಗೆ ಸಾಗಿದ ಎಲ್ಲ ಮಾರ್ಗಗಳ ಇಕ್ಕೆಲಗಳಲ್ಲಿ ನೆರೆದ ಭಕ್ತಸಮೂಹವು ಮೆರವಗೆ ಮೇಲೆ ಪುಷ್ಪವೃಷ್ಟಿಗೈದು ಸಿದ್ಧಾರೂಢ ಮಹಾರಾಜ ಕೀ ಜೈ ಎಂಬ ಘೋಷಣೆ ಕೂಗಿತು.

ಜಗದ್ಗುರು ಶ್ರೀಸಿದ್ಧಾರೂಢರ 190 ನೇ ಜಯಂತ್ಯುತ್ಸವ ಹಾಗೂ ಜಗದ್ಗುರು ಶ್ರೀ ಗುರುನಾಥಾರೂಢರ 115 ನೇ ಶತಮಾನೋತ್ಸವ, ಶಿವರಾತ್ರಿ ಮಹೋತ್ಸವ, ಜಾತ್ರೆ ಮತ್ತು ವಿಶ್ವವೇದಾಂತ ಪರಿಷತ್ ಅಂಗವಾಗಿ ಹತ್ತು ದಿನಗಳ ಕಾಲ ಜರುಗಲಿರುವ ವಿವಿಧ ಕಾರ್ಯಕ್ರಮಗಳ ಪೂರ್ವಭಾವಿಯಾಗಿ ನಡೆದ ಮೆರವಣಿಗೆಯಲ್ಲಿ ದಾವಣಗೆರೆಯ ಪಾಟೀಲರು ಪ್ರಾಯೋಜಿಸಿದ ಮತ್ತು ಬಸವರಾಜ ಕೆ.ಆರ್. ಉಸ್ತುವಾರಿಯ ಏಳು ಕಲಾತಂಡಗಳು ಭಾಗವಹಿಸಿದ್ದವು. ಡೋಲು, ಪುರುಷರು ಮತ್ತು ಮಹಿಳೆಯರ ಡೊಳ್ಳು, ವೀರಗಾಸೆ, ಪುರವಂತರ ತಂಡ, ಚೆಟ್ಟಿ ಮೇಳ, ಬೃಹತ್ ಗೊಂಬೆಗಳಲ್ಲದೇ, ಬ್ಯಾಂಡ್, ಜಾಂಜ್ ಮೆರವಣಿಗೆ ಮಾರ್ಗದಲ್ಲಿ ನೋಡುಗರ ಮನ ಸೆಳೆದವು. ಪುಟ್ಟ ಬಾಲಕರ ಭಜನಾ ತಂಡವು ಗಮನ ಸೆಳೆಯಿತು. ಮಾರ್ಗದ ವೃತ್ತಗಳಲ್ಲಿ ವಾದ್ಯ ಮೇಳ, ಪುರವಂತರು ಮತ್ತು ಗೊಂಬೆಗಳ ಕುಣಿತವು ಸಾರ್ವಜನಿಕರನ್ನು ಆಕರ್ಷಿಸಿತು.

Leave a Reply

Your email address will not be published. Required fields are marked *

error: Content is protected !!