ಉದಯವಾಹಿನಿ, ಕೋಲಾರ: ಇತ್ತೀಚೆಗೆ ಜಿಲ್ಲೆಯಲ್ಲಿ ಅಪರಾದ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕಳೆದ ಒಂದು ತಿಂಗಳಿಂದ ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳಿಂದ ೩ ಜನ ಸಾವನ್ನಪ್ಪಿದ್ದು, ಅತ್ಯಾಚಾರ ಮತ್ತು ಗಲಾಟೆ ಪ್ರಕರಣಗಳೂ ಸಹ ನಡೆದಿದ್ದು, ಇವುಗಳನ್ನು ತಡೆಯಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಆಂಧ್ರದ ಗಡಿಭಾಗ ಹಂಚಿಕೊಂಡಿರುವ ಕೋಲಾರ ಜಿಲ್ಲೆ ಬಹುತೇಕ ಆಂಧ್ರಪ್ರದೇಶದ ಜನರನ್ನೇ ಅನುಸರಿಸುವವರಿದ್ದಾರೆ. ಆದ್ದರಿಂದ ಸಣ್ಣ ಸಣ್ಣ ವಿಚಾರಗಳಿಗೂ ದೊಡ್ಡ ಮಟ್ಟದಲ್ಲಿ ಘರ್ಷಣೆಗಳು ಸಂಭವಿಸಿ ಸಾವಿನಲ್ಲಿ ಅಂತ್ಯವಾಗುತ್ತಿದೆ. ಆದ್ದರಿಂದ ಸ್ಥಳೀಯ ಪೊಲೀಸರು ಸಣ್ಣ ಗಲಾಟೆಗಳನ್ನು ನಿರ್ಲಕ್ಷಿಸದೆ ಗಂಭೀರವಾಗಿ ಪರಿಗಣಿಸಿ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಿದರೆ ಶಾಂತಿ ಕಾಪಾಡಬಹುದಾಗಿದೆ. ಕೈ ಕಾಲು ಮುರಿದು ಹಾಕಿ ಪ್ರಾಣಾಂತಕವಾಗಿ ಹಲ್ಲೆ ಮಾಡಿದ ದೂರು ನೀಡಿ ಎರಡು ಮೂರು ತಿಂಗಳು ಕಳೆದರೂ ಆರೋಪಿಯನ್ನು ಬಂಧಿಸಿಲ್ಲ. ಎಫ್.ಐ.ಆರ್. ಸಹ ಹಾಕಿಲ್ಲ ಎಂದರೆ ಪೊಲೀಸ್ ಇಲಾಖೆ ಎಂಬುವು ಜೀವಂತ ಇದೆಯೇ ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಲಿದೆ. ಯಾವಾಗ ಪೊಲೀಸರು ಕಾನೂನು ಕೈಗೆ ತೆಗೆದು ಕೊಳ್ಳದೆ ನಿರ್ಲಕ್ಷಿಸುತ್ತಾರೋ ಅಂಥಹ ಸಂದರ್ಭದಲ್ಲಿ ಸಾರ್ವಜನಿಕರೇ ಕಾನೂನು ಕೈಗೆ ತೆಗೆದು ಕೊಳ್ಳುವ ಪರಿಸ್ಥಿತಿಗೆ ಎಡೆ ಮಾಡಿ ಕೊಡುತ್ತಾರೆ ಎಂಬ ಟೇಕೆಗಳು ಕೇಳಿ ಬರುತ್ತಿದೆ.

ಸಾರ್ವಜನಿಕರಿಗೆ, ಬಡವರಿಗೆ, ರಕ್ಷಣೆ ನೀಡ ಬೇಕಾದ ಪೊಲೀಸ್ ಅಧಿಕಾರಿಗಳು ದೌರ್ಜನ್ಯ ಎಸೆಗಿ ಗುಂಡಾಗಿರಿ ಮಾಡುತ್ತಿರುವರಿಗೆ ರಕ್ಷಣೆಗೆ ನಿಂತಿರುವುದು ಬೇಲಿಯೇ ಹೊಲ ಮೇಯ್ದೆಂದಾಗಿದೆ ಎಂಬುವುದಕ್ಕೆ ವೇಮಗಲ್ ಪೊಲೀಸರ ಆಡಳಿತವೇ ಉತ್ತಮ ನಿದರ್ಶನವಾಗಿದೆ. ಈ ಪ್ರಕರಣದ ವಿರುದ್ದ ಲೋಕಾಯುಕ್ತ ಹಾಗೂ ಗೃಹ ಮಂತ್ರಿಗಳಿಗೂ ದೂರು ಹೋಗಿದೆ ಎನ್ನಲಾಗಿದೆ.
ಕಳೆದ ೨೦೨೩ ರ ಅಕ್ಟೋಬರ್ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿ ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳು ರಾಜ್ಯ ಮಟ್ಟದಲ್ಲಿ ಸದ್ದು ಮಾಡಿದ್ದವು. ಆಗಿನ ಜಿಲ್ಲಾ ರಕ್ಷಣಾಧಿಕಾರಿ ನಾರಾಯಣ್ ಜಿಲ್ಲೆಯಲ್ಲಿ ನಡೆಯುವ ಅಪರಾಧ ಪ್ರಕರಣಗಳಿಗೆ ಸ್ಥಳೀಯ ಠಾಣಾ ವ್ಯಾಪ್ತಿಯ ಪೊಲೀಸರೇ ಹೊಣೆಗಾರರಾಗಿರುತ್ತಾರೆ. ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಕಟ್ಟು ನಿಟ್ಟಾಗಿ ಆದೇಶ ಜಾರಿಗೊಳಿಸಿದ್ದರು.

Leave a Reply

Your email address will not be published. Required fields are marked *

error: Content is protected !!