ಉದಯವಾಹಿನಿ, ಹಾಸನ: ಜಿಲ್ಲಾ ಉಸ್ತುವಾರಿ ಸಚಿವರ ಕೃಷ್ಣಭೈರೇಗೌಡರ ಸಭೆ ವೇಳೆ ಮಾಜಿ ಜಿ.ಪಂ.ಸದಸ್ಯ ಡಿ.ಸಿ ಸಣ್ಣಸ್ವಾಮಿ ಹಾಗೂ ಸಕಲೇಶಪುರ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಮುರಳಿ ಮೋಹನ್ ಕಿತ್ತಾಡಿಕೊಂಡಿದ್ದಾರೆ. ಸಕಲೇಶಪುರ ಪಟ್ಟಣದಲ್ಲಿ ಜನಸ್ಪಂದನ ಸಭೆ ನಡೆಸಿದ ಉಸ್ತುವಾರಿ ಸಚಿವರು ಸುಮಾರು 960 ಅರ್ಜಿ ವಿಲೆವಾರಿ ಮಾಡಿದರು. ಬಳಿಕ ತಾಲೂಕು ಕಛೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಲು ಮುಂದಾದರು. ಇದೇ ಸಂದರ್ಭದಲ್ಲಿ ಸಭಾಂಗಣದೊಳಗೆ ಹೋಗಲು ಸಣ್ಣಸ್ವಾಮಿ ಮುಂದಾಗಿದ್ದು ಸಣ್ಣಸ್ವಾಮಿಯವರನ್ನು ಪೊಲೀಸರು ತಡೆದು ತಳ್ಳಿದ್ದಾರೆ. ಇದಕ್ಕೆ ಮುರಳಿ ಮೋಹನ್ ತಡೆದಿದ್ದಾರೆ ಎಂದು ಸಣ್ಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಕಲೇಶಪುರದಲ್ಲಿ ರೌಡಿಸಂ ಶುರುವಾಗಿದೆ. ಅಧಿಕಾರಿಗಳನ್ನು ಹೆದರಿಸಿ ದಂಧೆ ಮಾಡುವ ಕೆಲಸ ನಡಿಯುತ್ತಿದೆ. ನನ್ನನ್ನು ಸಭೆಗೆ ಬರಬೇಡ ಎಂದು ತಡೆಯಲು ಅವನು ಯಾರು, ಬೇಕಿದ್ದರೆ ಪೊಲೀಸರು ತಡೆಯಲಿ. ಆದರೆ ಹಿರಿಯ ನಾಯಕನಾದ ನನ್ನ ಯಾಕೆ ತಡೆಯುತ್ತಾರೆ ಎಂದು ತಮ್ಮ ಬೆಂಬಲಿಗರ ಜೊತೆ ತಾಲೂಕು ಕಛೇರಿ ಎದುರು ನಿಂತು ಮುರಳಿ ಮೋಹನ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
