ಉದಯವಾಹಿನಿ, ಬೆಳವಣಿಕಿ: ಸಮೀಪದ ಮಲಾಪುರ ಗ್ರಾಮದ ಶರಣಬಸವೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ವಿವಾಹ ಮಹೋತ್ಸವ ಹಾಗೂ ನೂತನ ಶರಣಬಸವೇಶ್ವರ ಮಹಾರಥೋತ್ಸವ ವಿಜೃಂಭಣೆಯಿಂದ ನಡೆಯಿತು. ನೂತನ ರಥೋತ್ಸವದಲ್ಲಿ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಅನೇಕ ಭಕ್ತರು ಭಾಗವಹಿಸಿದ್ದರು.
ಉತ್ತತ್ತಿ, ಬಾಳೆಹಣ್ಣು ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು. ಈ ಸಮಯದಲ್ಲಿ ಮುತ್ತೈದೆಯರ ಆರತಿಯೊಂದಿಗೆ, ಡೊಳ್ಳು, ಕರಡಿ ಮಜಲು, ಹಾಗೂ ಜಾಂಜ್ ಮೇಳದವರು ಪಾಲ್ಗೊಂಡಿದ್ದರು.
ನರಗುಂದ ಪತ್ರಿವನಮಠದ ಗುರುಸಿದ್ದ ಶಿವಯೋಗಿ ಶಿವಾಚಾರ್ಯರು ನೂತನ ರಥ ಉದ್ಘಾಟಿಸಿದರು. ಅಭಿನವ ಪಂಚಾಕ್ಷರ ಶಿವಾಚಾರ್ಯ
ಅಡೂರಮಠ, ರೋಣದ ಗುಲಗಂಜಿ ಮಠದ ಗುರುಪಾದ ದೇವರು, ಚಂದ್ರಶೇಖರ ಶಿವಾಚಾರ್ಯ ಹಿರೇಮಠ ಸತ್ತಿಗೇರಿ, ರಾಜನಳ್ಳಿ ವಾಲ್ಮೀಕಿ ಪೀಠದ ಶ್ರೀಗಳು, ಗಂಗಾಧರ ಸ್ವಾಮೀಜಿ ಕೊತಬಾಳ, ಶಾಂತಲಿಂಗ ಸ್ವಾಮೀಜಿ, ವೇದಮೂರ್ತಿ ಸ್ವಾಮೀಜಿ, ಮಾಜಿ ಶಾಸಕ ಬಿ.ಆರ್.ಯಾವಗಲ್ ಹಾಗೂ ಶಾಸಕ ಜಿ.ಎಸ್.ಪಾಟೀಲ ಅವರ
ಸಮ್ಮುಖದಲ್ಲಿ ರಥೋತ್ಸವ ನಡೆದ ಬಳಿಕ ಧರ್ಮಸಭೆ ನಡೆಯಿತು.
