ಉದಯವಾಹಿನಿ, ಬೆಳ್ತಂಗಡಿ: ಕಂಬಳದಲ್ಲಿ 147 ಜತೆ ಕೋಣಗಳು ಭಾಗವಹಿಸಿದ್ದವು. ಕನೆ ಹಲಗೆ ವಿಭಾಗದಲ್ಲಿ 4 ಜತೆ ಕೋಣಗಳು ಭಾಗವಹಿಸಿದ್ದು, ಹಂಕರಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ ಅವರ ಕೋಣಗಳು (ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ), ನಿಡೋಡಿ ಕಾನ ರಾಮ ಸುವರ್ಣ ಅವರ ಕೋಣಗಳು (ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ) 6.5 ಕೋಲು ನಿಶಾನೆಗೆ ನೀರು ಹಾಯಿಸುವ ಮೂಲಕ ಬಹುಮಾನ ಗೆದ್ದುಕೊಂಡವು. ಅಡ್ಡಹಲಗೆ ವಿಭಾಗದಲ್ಲಿ ಭಾಗವಹಿಸಿದ 4 ಜತೆ ಕೋಣಗಳಲ್ಲಿ ನಾರಾವಿ ಯುವರಾಜ್ ಜೈನ್ ಅವರ (ಹಲಗೆ ಮುಟ್ಟಿದವರು: ಭಟ್ಕಳ ಹರೀಶ್) ಕೋಣಗಳು ಪ್ರಥಮ, ಬೋಳಾರ ತ್ರಿಶಾಲ್ ಕೆ.ಪೂಜಾರಿ ಅವರ (ಹಲಗೆ ಮುಟ್ಟಿದವರು: ಮಂದಾರ್ತಿ ಭರತ್ ನಾಯ್) ಕೋಣಗಳು ದ್ವಿತೀಯ ಸ್ನಾನವನ್ನು ಪಡೆದುಕೊಂಡವು.
ಹಗ್ಗ ಹಿರಿಯ ವಿಭಾಗದಲ್ಲಿ ಭಾಗವಹಿಸಿದ್ದ 12 ಜತೆ ಕೋಣಗಳ ಪೈಕಿ ವೇಣೂರು ಮುಡುಕೋಡಿ ಗಣೇಶ್ ನಾರಾಯಣ್ ಪಂಡಿತ್ ಅವರ ಕೋಣಗಳು (ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ) ಪ್ರಥಮ, ನಕ್ಕೆ ಮಹೋಧರ ನಿವಾಸ ಇಶಾನಿ ತುಕ್ರ ಭಂಡಾರಿ ಅವರ ಕೋಣಗಳು (ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ) ದ್ವಿತೀಯ ಸ್ನಾನವನ್ನು ಪಡೆದುಕೊಂಡವು.
