ಉದಯವಾಹಿನಿ, ಬಾಳೆಹೊನ್ನೂರು: ಪಟ್ಟಣದ ಸುತ್ತಮುತ್ತ ಸುರಿದ ಭಾರಿ ಮಳೆ, ಗಾಳಿಯಿಂದ ರಂಭಾಪುರಿ ಪೀಠದಲ್ಲಿ ಅಪಾರ ಹಾನಿ ಸಂಭವಿಸಿದೆ. ರಭಸದ ಗಾಳಿಯಿಂದ ಪೀಠದ ರೇಣುಕಾ ಮಂದಿರ, ರುದ್ರಮುನಿ ಸಮುದಾಯ ಭವನ ಹಾಗೂ ರುದ್ರ ಮುನೀಶ್ವರ ವಸತಿ ಪ್ರೌಢಶಾಲೆಯ ಹೆಂಚು ಹಾಗು ತಗಡಿನ ಶೀಟ್‌ಗಳು ಹಾರಿ ಹೋಗಿವೆ. ಮಾಡಿನ ಕಬ್ಬಿಣದ ಸಲಾಕೆಯೂ ಕಳಚಿ ಬಿದ್ದಿದೆ. ₹1 ಲಕ್ಷ ಮೊತ್ತದಷ್ಟು ಹಾನಿ ಅಂದಾಜಿಸಲಾಗಿದೆ. ಚೌಡೇಶ್ವರಿ ದೇವಸ್ಥಾನದ ಬಳಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಶೆಡ್ ಗಾಳಿ ಮಳೆಗೆ ನೆಲಕಚ್ಚಿದೆ.
