ಉದಯವಾಹಿನಿ, ಮಳವಳ್ಳಿ: ತಾಲ್ಲೂಕಿನ ತಳಗವಾದಿ ಗ್ರಾಮದಲ್ಲಿ 26 ದಿನಗಳಿಂದ ನಡೆದ ಗ್ರಾಮ ದೇವತೆ ಉಮಾಮಹೇಶ್ವರಿ ದೊಡ್ಡಹಬ್ಬಕ್ಕೆ ಭಾನುವಾರ ಕೊಂಡೋತ್ಸವ ಮೂಲಕ ತೆರೆ ಬಿತ್ತು. 9 ವರ್ಷಕ್ಕೊಮ್ಮೆ ನಡೆಯುವ ಈ ಹಬ್ಬ ಮಾ.6ರಿಂದ ಆರಂಭವಾಗಿತ್ತು. ಗ್ರಾಮದ ಎಲ್ಲೆಡೆ ವಿದ್ಯುತ್ ದೀಪಾಲಾಂಕಾರ ಮಾಡಲಾಗಿತ್ತು.ಬಹುತೇಕ ದೇವಸ್ಥಾನಗಳನ್ನು ಮಧುವಣಗಿತ್ತಿಯಂತೆ ಶೃಂಗರಿಸಿದರು. ಗ್ರಾಮ ದೇವತೆ ಉಮಮಾಹೇಶ್ವರಿ ದೇವಸ್ಥಾನಕ್ಕೆ ವಿಶೇಷ ಮೆರಗು ನೀಡಲಾಗುತ್ತಿತ್ತು.ಅರ್ಚಕ ಚಿಕ್ಕಲಿಂಗಯ್ಯ, ಆರಾಧ್ಯ ಮನೆತನದ ಸುಮಂತ್ ಆರಾಧ್ಯ ಹಾಗೂ ಅಭಿಷೇಕ್ ಆರಾಧ್ಯ ಪೂಜೆ ಸಲ್ಲಿಸಿ ಬಂಡಿ ಉತ್ಸವಕ್ಕೆ ಚಾಲನೆ ನೀಡಿದರು. 11 ತೆಂಡೆಯ ಯಜಮಾನರು, ಮೂವರು ಬೀದಿ ಗೌಡರು ಹಾಗೂ ಮುಖಂಡರು ಭಾಗಿಯಾಗಿದ್ದರು.
ಉಮಾಮಹೇಶ್ವರಿ ದೇವಸ್ಥಾನದತ್ತ ಸಾಗಿದ ಬಂಡಿ ಉತ್ಸವವು ದೇವಸ್ಥಾನದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಿದ್ದರು. ಸಾವಿರಾರು ಸಂಖ್ಯೆಯಲ್ಲಿ ನೆರದಿದ್ದ ಜನರು ಸಂಭ್ರಮ ಮುಗಿಲು ಮುಟ್ಟಿತ್ತು. ರೈತರು ತಮ್ಮ ರಾಸುಗಳನ್ನು ದೇವಸ್ಥಾನ ಸುತ್ತ ಮೆರವಣಿಗೆ ನಡೆಸಿದರು.
ಗೌಡಯ್ಯನಕಟ್ಟೆಯ ಬಳಿಯ ಹಿರಿಯಮ್ಮ ದೇವರಿಗೆ ಗ್ರಾಮದ ಮಹಿಳೆಯರು ಪೂಜೆ ಸಲ್ಲಿಸಿದರು.ಧಾರಾವಾಡ ಗದಗ ರಾತ್ರಿ ಗೌಡನಕಟ್ಟೆ ಹಿರಿಯಮ್ಮ ದೇವರ ಸನ್ನಿಧಿಯಿಂದ ಅಗ್ನಿ ತಂದು ಉಮಾಮಹೇಶ್ವರಿ ದೇವಸ್ಥಾನದ ಬಳಿ ಕೊಂಡಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು.
