ಉದಯವಾಹಿನಿ, ಕಲಬುರಗಿ: ನಕಲಿ ಅಂಕಪಟ್ಟಿ ತಯಾರಿಸಿ ವಿತರಣೆ‌ ಪ್ರಕರಣದಲ್ಲಿ ಸಿಕ್ಕಿಬಿದ್ದು ಕಲಬುರಗಿ ಸ್ಟೇಷನ್ ಬಜಾರ್ ಪೊಲೀಸರ ವಶದಲ್ಲಿರುವ ದೆಹಲಿ ಮೂಲದ ನಕಲಿ ಅಂಕಪಟ್ಟಿಯ ಪ್ರಮುಖ ರೂವಾರಿ ಆರೋಪಿ ರಾಜೀವ್ ಸಿಂಗ್ ಅರೋರಾ ಅವರಿಗೆ ಜಾಮೀನು ನೀಡಲು ಇಲ್ಲಿನ 5ನೇ ಹೆಚ್ಚುವರು ವಿಶೆಷ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನಿರಾಕರಿಸಿದೆ.
2020ರ ಜುಲೈ 8 ರಂದು ಖಚಿತ ಮಾಹೊತಿ ಮೇರೆಗೆ ಕಲಬುರಗಿಯ ಸ್ಟೇಷನ್ ಬಜಾರ ಆರಕ್ಷಕ ನೀರಿಕ್ಷಕರು ತಮ್ಮ ಸಿಬ್ಬಂದಿಯವರೊಂದಿಗೆ ಕಲಬುರಗಿ ನಗರದ ಏಶಿಯನ್ ಮಾಲ್‌ನ ಮೊದಲನೇ ಮಹಡಿಯ ಬಟ್ಟೆ ಅಂಗಡಿಗೆ ದಾಳಿ ಮಾಡಿ ಅಲ್ಲಿ 10 ಮತ್ತು 12 ನೇ ತರಗತಿ, ಡಿಪ್ಲೋಮಾ, ಐಟಿಐ, ಬಿಇ ಹಾಗೂ ಬಿಟೆಕ್ ಪದವಿಯ ನಕಲಿ ಅಂಕಪಟ್ಟಿಗಳನ್ನು ವಿತರಿಸುತ್ತಿದ್ದ ಮಹ್ಮದ ಖಾನ್ ಎನ್ನುವ ವ್ಯಕ್ತಿಯನ್ನು ದಸ್ತಗಿರಿ ಮಾಡಿ ಅವನ ಬಳಿ ಇದ್ದ ಲ್ಯಾಪಟ್ಯಾಪ್, ನಗದು ಹಣ ಮತ್ತು ನಕಲಿ ಅಂಕಪಟ್ಟಿಗಳನ್ನು ಜಪ್ತಿ ಮಾಡಲಾಗಿತ್ತು. ಮಹ್ಮದ ಖಾನ್ ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಮುಖ ರೂವಾರಿಯಾದ ದೆಹಲಿ ಮೂಲದ ರಾಜೀವಸಿಂಗ್ ಆರೋರಾ ಎನ್ನುವ ವ್ಯಕ್ತಿಯನ್ನು 2025ರ ಫೆಬ್ರವರಿ 18 ರಂದು ದೆಹಲಿಯಲ್ಲಿ ವಶಕ್ಕೆ ಪಡೆದು ಆತನ ವಶದಲ್ಲಿದ್ದ ಭಾರತದ ವಿವಿಧ ರಾಜ್ಯಗಳ 28 ವಿಶ್ವವಿದ್ಯಾಲಯಗಳಿಗೆ ಸೇರಿದ 17 ವಿವಿಧ ಶಿಕ್ಷಣ ಸಂಸ್ಥೆಗಳ ಹೆಸರಿನಲ್ಲಿರುವ 122 ಶೀಲುಗಳು, 522 ನಕಲಿ ಅಂಕಪಟ್ಟಿಗಳು ಮತ್ತು ವಿವಿಧ ಗುರುತಿನ ಚೀಟಿಗಳನ್ನು ಮತ್ತು 3,29,500 ರೂ. ನಕಲಿ ಅಂಕಪಟ್ಟಿಗೆ ಸಂಬಂಧಿಸಿದ ಹಣ ಮತ್ತು ನಕಲಿ ಅಂಕಪಟ್ಟಿ ತಯಾರಿಸಲು ಬಳಸುವ ತಾಂತ್ರಿಕ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!