ಉದಯವಾಹಿನಿ,  ಕೆ.ಆರ್.ಪುರ : ಶ್ರೀ ರಾಮನವಮಿ ಅಂಗವಾಗಿ ಮಹದೇವಪುರ ಕ್ಷೇತ್ರದ ಹೂಡಿ ಗ್ರಾಮದಲ್ಲಿ ಜನ ಸಹಯೋಗ ಸಂಘಟನೆ ಕಾರ್ಯಕರ್ತರು ಬೈಕ್ ರ್ಯಾಲಿ ಕೈಗೊಳ್ಳುವ ಮೂಲಕ ೭ನೇ ವರ್ಷದ ಅದ್ದೂರಿಯಾಗಿ ಶ್ರೀ ರಾಮನ ರಥಯಾತ್ರೆ ಮಾಡಿದರು.ಹೂಡಿ ಗ್ರಾಮ ದಿಂದ ಪ್ರಾರಂಭವಾದ ಶ್ರೀ ರಾಮನ ರಥವು ಹೋಪ್ ಪಾರಂ ಸರ್ಕಲ್, ವೈಟ್ ಫೀಲ್ಡ್, ವರ್ತೂರು ಕೋಡಿ ಕುಂದಲಹಳ್ಳಿ, ಮಾರತ್ತಹಳ್ಳಿ ಹೊರ ವರ್ತುಲ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ರಥ ತೆರಳಿತು.
ಶ್ರೀರಾಮನ ರಥಯತ್ರೆಯಲ್ಲಿ ನೂರಾರು ಯುವಕರು ಬೈಕ್ ರ್‍ಯಾಲಿಯಲ್ಲಿ ಪಾಲ್ಗೊಂಡು ಶ್ರೀ ರಾಮನ ಕೃಪೆಗೆ ಪಾತ್ರರಾದರು.
ಕ್ಷೇತ್ರದ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಹೆಚ್ ಎಸ್. ಪಿಳ್ಳಪ್ಪ, ಜನ ಸಹಯೋಗ ಸಂಘಟನೆಯ ಅಧ್ಯಕ್ಷ ಬೀರ್ ಬಹದ್ದೂರು ಸಿಂಗ್, ಉಪಾಧ್ಯಕ್ಷ ಥಾನೇ ಕುಮಾರ್, ಖಜಾಂಚಿ ಪಂಕಜ್ ಥಾಕೂರ್, ಪದಾಧಿಕಾರಿಗಳು ಅಜಯ್ ಶರ್ಮ, ಮನೋಜ್ ಸಿಂಗ್, ಅಜಿತ್ ಸಿಂಗ್, ಸಂಜಯ್ ಸಿಂಗ್, ಅನೂಪ್ ಗುಪ್ತ, ಸುನೀಲ್ ಸಿಂಗ್ ಸೇರಿದಂತೆ ಹಲವಾರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!