ಉದಯವಾಹಿನಿ, ಕಲಬುರಗಿ: ಮನುಷ್ಯ ತ್ಯಾಗದ ಹಾದಿ ಬಿಟ್ಟು ಭೋಗದ ಮಾರ್ಗದಲ್ಲಿ ನಡೆಯುತ್ತಿದ್ದು ಇದರಿಂದ ಅತಿಯಾದ ದುರಾಸೆ ಮೂಡಿ ಸಂತೃಪ್ತಿಯಿಂದ ಜೀವನ ನಡೆಸಬೇಕಾದ ಮಾನವ ಅತೃಪ್ತಿಯಿಂದ ಬಾಳು ನಡೆಸುತ್ತಿದ್ದಾನೆ ಹೀಗಾಗಿ ಇಂದು ನಾವುಗಳು ಸಮಾಜದಲ್ಲಿ ಹಿಂಸೆ ಕಾಣುತ್ತಿದ್ದೇವೆ ಎಂದು ಮಾಜಿ ಶಾಸಕ ದತ್ತಾತ್ರೇಯ ಸಿ.ಪಾಟೀಲ ರೇವೂರ ಅವರು ನುಡಿದರು.
ಭಗವಾನ ಮಹಾವೀರ ತೀಥರ್ಂಕರರ 2624ನೇ ಜನ್ಮ ಕಲ್ಯಾಣ ಮಹೋತ್ಸವ ನಿಮಿತ್ತ ಜೈನ ಸಮಾಜದ ವತಿಯಿಂದ ಆಯೋಜಿಸಿದ ಭವ್ಯ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಮಾಜದಲ್ಲಿ ಹಿಂಸೆ ಮೂಡುತ್ತಿದೆ ಭವಿಷ್ಯದ ದೃಷ್ಟಿಯಿಂದ ಇಂದು ಅತಂಕಕಾರಿಯಾಗಿದ್ದು ಪ್ರತಿಯೊಬ್ಬರು ಅಹಿಂಸೆಯ ಮಾರ್ಗದಲ್ಲಿ ನಡೆಯಬೇಕಾಗಿದ್ದು ಅತ್ಯಂತ ಅವಶ್ಯವಾಗಿದ್ದು ಮಾನವ ಕುಲ ಕಲ್ಯಾಣದ ವಿಚಾರಗಳನ್ನು ಭೋದಿಸಿರುವ ಭಗವಾನ ಶ್ರೀ ಮಹಾವೀರ ತೀಥರ್ಂಕರರ ತೋರಿದ ಪಥದಲ್ಲಿ ಮುನ್ನಡೆದರೆ ಹಿಂಸೆ ಮಾಯವಾಗಿ ಅಹಿಂಸೆಯ ಸಮಾಜ ನಿರ್ಮಾಣವಾಗಲಿ.ಜೈನ ಸಮಾಜ ಸರ್ವರನ್ನು ಪ್ರೀತಿಸುವ ಮತ್ತು ಗೌರವಿಸುವ ಸಮಾಜವಾಗಿದೆ ಎಂದು ರೇವೂರ ಹೇಳಿದರು. ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಪೂಜ್ಯ ಲಿಂಗರಾಜ ಅಪ್ಪಾ, ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಡಳಿತ ಮಂಡಳಿಯ ಸದಸ್ಯ ಅರುಣಕುಮಾರ ಪಾಟೀಲ,ಜೈನ ಸಮಾಜದ ಪ್ರಮುಖರಾದ ನಾಗನಾಥ ಚಿಂದೆ, ಸುರೇಶ ತಂಗಾ,ರಮೇಶ ಗಡಗಡೆ, ಪ್ರಕಾಶ ಜೈನ,ಅನೀಲ ಜೈನ,ರಾಜೇಂದ್ರ ಕುಣಚಗಿ, ಧರಣೇಂದ್ರ ಸಂಗಾಮಿ,ರಮೇಶ ಬೆಳಕೇರಿ, ಅನೀಲ ಬಸ್ಮೆ, ಚೇತನ ಪಂಡಿತ, ದರ್ಶನ ಪಂಡಿತ, ವಿನೋಧ ಬಬಲಾದ, ಸುನೀಲ ಪಂಡಿತ, ವಿಜಯಕುಮಾರ ಪಾಂಡ್ರೆ, ಬಿ.ಕೆ ಪಾಟೀಲ, ಪಾರಸ ಬೆಳಕೇರಿ ಧರಣೇಂದ್ರ ಕಣ್ಮಸೆ, ಶೀತಲ್ ಕುಲಕರ್ಣಿ, ಶಿಲ್ಪಾ ಕುಲಕರ್ಣಿ, ಛಾಯಾ ವನಕುದುರೆ ಸೇರಿದಂತೆ ಮಹಿಳಾ ಭಜನಾ ಮಂಡಳದವರು ಸಮಸ್ತ ಜೈನ ಸಮಾಜದ ಭಾಂಧವರು ಭಾಗವಹಿಸಿದ್ದರು. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಅಲಗೂರು ಕಲಾವಿದರು ಹಾಡಿದ ಜಿನ ಭಗವಾನರ ಹಾಡುಗಳಿಗೆ ಮಹಿಳೆಯರು ಮತ್ತು ಯುವಕರು ನೃತ್ಯ ನೋಡುಗರ ಕಣ್ಮನ ಸೆಳೆಯಿತು.

Leave a Reply

Your email address will not be published. Required fields are marked *

error: Content is protected !!