ಉದಯವಾಹಿನಿ, ಬೇತಮಂಗಲ: ರಾಮಸಾಗರ ಗ್ರಾಪಂ ವ್ಯಾಪ್ತಿಯ ಸರ್ವರೆಡ್ಡಿಹಳ್ಳಿ-ಪಿಲ್ಲಗುಂಡ್ಲಹಳ್ಳಿ ಮಧ್ಯದಲ್ಲಿರುವ ಹೊಸ ಕೆರೆಯಲ್ಲಿ ಈಜಲು ಹೋಗಿದ್ದ ಯುವಕರಿಬ್ಬರೂ ಸೇರಿ ರಕ್ಷಿಸಲು ಹೋಗಿದ್ದ ತಂದೆ ರಮೇಶ್ ಸಹ ಮೃತಪಟ್ಟಿರುವ ಘಟನೆ ಬೇತಮಂಗಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಪಟ್ಟಣದ ಬಳಿಯ ರಾಮಸಾಗರ ಗ್ರಾಪಂನ ವಡ್ಡರಹಳ್ಳಿ ಗ್ರಾಮದ ನೀರು ಗಂಟಿ ರಮೇಶ್(೪೫), ಪುತ್ರ ಆಗಸ್ತ್ಯಾ(೧೨), ಇದೇ ಗ್ರಾಮದ ಶಂಕರಪ್ಪನ ಪುತ್ರ ಚರಣ್(೧೫) ಮೃತ ದುರ್ದೈವಿಗಳಾಗಿದ್ದಾರೆ.
ನೀರುಗಂಟಿ ರಮೇಶ್ ತನ್ನ ಮಗನ ಜೋತೆಗೆ ಗ್ರಾಮದ ಚರಣ್ ಇಬ್ಬರನ್ನು ಕೆರೆಗೆ ಈಜಲು ಕರೆದುಕೊಂಡು ಹೋಗಿದ್ದ ಎನ್ನಲಾಗಿದ್ದು, ಇವರಿಗೆ ಸರಿಯಾಗಿ ಈಜಲು ಬರದೆ ಮುಳುಗುತ್ತಿದ್ದಂತೆ ಸ್ಥಳದಲ್ಲೇ ಇದ್ದ ರಮೇಶ್ ಮಕ್ಕಳನ್ನು ರಕ್ಷಿಸಲು ಹೋಗಿ ತಾನೂ ಮೃತಪಟ್ಟರುವ ಧಾರುಣ ಘಟನೆ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಬೇತಮಂಗಲ ಪೊಲೀಸಲು ಸ್ಥಳಕ್ಕೆ ಬೇಟಿ ನೀಡಿ ಕ್ರಮ ಕೈಗೊಂಡಿದ್ದಾರೆ. ವಿಷಯ ತಿಳಿದ ಕುಟುಂಭಸ್ಥರು, ಗ್ರಾಮಸ್ಥರು ಸ್ಥಳಕ್ಕೆ ಬೇಟಿ ನೀಡಿದ್ದು, ಮೃತರ ಕುಟುಂಭಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು, ಬೇಸಿಗೆ ರಜೆ ಹಾಗೂ ಇಂದು ಮಹವೀರ್ ಜಯಂತಿ ಪ್ರಯುಕ್ತ ಶಾಲಾ ರಜೆಯಿಂದ ಮಕ್ಕಳು ಈಜಲು ಕೆರೆಗಳಿಗೆ ತೆರಳಿದ್ದು, ದುರಂತಕ್ಕೆ ಕಾರಣವಾಗಿದೆ.
ಚೆನೈ ಕಾರಿಡಾರ್, ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯೆಕ್ಕೆ ಆಕ್ರೋಶ: ಅಧಿಕಾರಿಗಳ ನಿರ್ಲಕ್ಷ್ಯೆಯಿಂದ ಕೆರೆಗಳಲ್ಲಿ ಅಕ್ರಮವಾಗಿ ಮಣ್ಣನ್ನು ಬೇಕಾ ಬಿಟ್ಟಿಯಾಗಿ ಆಲವಾಗಿ ಮಣ್ಣು ಆಗೆಯಲಾಗಿದ್ದು, ಹಳ್ಳಗಳಿಂದ ಮಕ್ಕಳಿಗೆ ನೀರಿನ ಮಟ್ಟ ತಿಳಿಯದೆ ಪ್ರಾಣ ಕಳೆದುಕೊಂಡಿದ್ದಾರೆಂದು ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯೆ ಹಾಗೂ ಚೆನೈ ಕಾರಿಡಾರ್ ರಸ್ತೆ ಗುತ್ತಿಗೆದಾರರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
