ಉದಯವಾಹಿನಿ, ಅರಸೀಕೆರೆ: ರಾಜ್ಯದ ನಾನಾ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರನ್ನು ಹೊಂದಿರುವ ತಾಲ್ಲೂಕಿನ ಗುರು ಜೇನುಕಲ್ಲು ಸಿದ್ಧೇಶ್ವರ ಸ್ಮಾಯಿಯ ಜಾತ್ರಾ ಮಹೋತ್ಸವ ಶನಿವಾರ ಹಾಗೂ ಭಾನುವಾರ ವಿಜೃಂಭಣೆಯಿಂದ ನಡೆಯಲಿದೆ.ಜಾತ್ರೆ ಅಂಗವಾಗಿ ಶನಿವಾರ ರಾತ್ರಿಯಿಡಿ ವೈಭವದ ಉತ್ಸವಗಳು ನಡೆಯಲಿದ್ದು ಭಾನುವಾರ ಬೆಳಿಗ್ಗೆ ಕೆಂಡೋತ್ಸವ ನಂತರ ಅದ್ಧೂರಿ ರಥೋತ್ಸವ ಜರುಗಲಿದೆ.ರಥೋತ್ಸವಕ್ಕೆ ಕ್ಷೇತ್ರಾಭಿವೃದ್ಧಿ ಮಂಡಳಿ ಹಾಗೂ ಭಕ್ತ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದ್ದು, ವಿವಿಧ ಉತ್ಸವಗಳಲ್ಲಿ ಸಹಸ್ರಾರು ಭಕ್ತರು ಪಾಲ್ಗೊಳ್ಳುತ್ತಿದ್ದಾರೆ.ಸಾಮ್ರಾಜ್ಯತ್‌ವ, ಹುಲಿವಾಹನ, ಸೂರ್ಯಮಂಡಲೋತ್ಸವ, ಬೆಳ್ಳಿ ಪಲ್ಲಕ್ಕಿ ಉತ್ಸವ, ಬಿಲ್ವ, ವ್ಯಕೋತ್ಸವ, ಹರಕೆ ಹೊತ್ತ ಭಕ್ತಾದಿಗಳಿಗೆ ಬಾಯಿಬೀಗ ಧಾರಣೆ, ಚಂದ್ರಮಂಡಲೋತ್ಸವ, ಅಗ್ನಿಕುಂಡ ಸೇವೆ ಹಾಗೂ ಕೆಂಚಮ್ಮನವರ ದೇವಸ್ಥಾನದಲ್ಲಿ ಗುಗ್ಗಳ ಸೇವೆಗಳು ಶಾಸ್ರೋಕ್ತವಾಗಿ ಜರುಗಲಿವೆ. ನಂತರ ಯಳವಾರ ಚೆಲುವರಾಯ ಸ್ವಾಮಿ ಪೂಜೆಯೊಂದಿಗೆ ರಥೋತ್ಸವ ನಡೆಯಲಿದ್ದು, ತಾಲ್ಲೂಕಿನ ಹಲವು ಗ್ರಾಮೀಣ ಭಾಗದ ದೇವರ ಒಕ್ಕಲುಗಳು ದರ್ಶನ ಪಡೆದು
ಪುನೀತರಾಗಲಿದ್ದಾರೆ.
