ಉದಯವಾಹಿನಿ, ಕೋಲಾರ: ನಗರದ ಕಠಾರಿಪಾಳ್ಯದ ಶ್ರೀ ಧರ್ಮರಾಯಸ್ವಾಮಿ ದ್ರೌಪದಮ್ಮ ದೇವಾಲಯದ ಮುಂಭಾಗದಲ್ಲಿ ನಿರ್ಮಿಸಿ ವೇದಿಕೆಯಲ್ಲಿ ಕರಗದ ಹೊತ್ತ ಪೂಜಾರಿ ಕೃಷ್ಣಮೂರ್ತಿ ಅವರು ಸುಮಾರು ಅರ್ಧ ತಾಸಿಗೂ ಹೆಚ್ಚು ಕಲಾ ಅದ್ಬುತವಾದ ಕಲಾ ಪ್ರದರ್ಶವನ್ನು ನೀಡಿದರು. ವಾದ್ಯಗಳ ಮತ್ತು ತಮಟೆಯ ತಾಳಕ್ಕೆ ಲಯಬದ್ದವಾದ ಹೆಚ್ಚೆಗಳನ್ನು ಇಡುತ್ತಾ ನರ್ತಿಸಿದ್ದು ಕಿಕ್ಕಿರಿದು ನೆರೆದಿದ್ದ ಸಾರ್ವಜನಿಕರ ಮನ ರಂಜಿಸಿತು. ಕೆಲ ಕಾಲ ಮಳೆ ಬಂದಿತಾದರೂ ನಂತರ ಕಗರವು ನಗರದ ಎಲ್ಲೆಡೆ ಸಂಚರಿಸಿತು. ಕತ್ತಿ ಹಿಡಿದ ವೀರಕುಮಾರರು ಕರಗದ ಹಿಂದೆ ಗೋವಿಂದ,, ಗೋವಿಂದ,, ಎಂದು ಕೊಗುತ್ತಿದ್ದರು
