ಉದಯವಾಹಿನಿ, ಕೊಳ್ಳೇಗಾಲ: ಅಕ್ರಮವಾಗಿ ಮಾರಾಟ ಮಾಡಲು ಒಣ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಗ್ರಾಮಾಂತರ ಪೆÇಲೀಸ್ ಠಾಣಾ ಅಧಿಕಾರಿಗಳು ಬಂಧಿಸಿದ್ದಾರೆ. ತಾಲೂಕಿನ ಪುಟ್ಟ ಇರಮ್ಮಾನದೊಡ್ಡಿ ನಿವಾಸಿ ರಂಗೇಗೌಡ ಅಲಿಯಾಸ್ ರಂಗಸ್ವಾಮಿ ಬಿನ್ ಸಿದ್ದೇಗೌಡ (38 ವರ್ಷ) ಬಂಧಿತ ಆರೋಪಿಯಾಗಿದ್ದಾನೆ.
ಆರೋಪಿ ರಂಗೇಗೌಡ ಎಂಬಾತ ಅಕ್ರಮವಾಗಿ ಮಾರಾಟ ಮಾಡಲು ಒಣ ಗಾಂಜಾ ಸಾಗಿಸುತ್ತಿದ್ದ ಎಂಬ ಖಚಿತ ಮಾಹಿತಿ ಮೇರೆಗೆ ಪಿ.ಎಸ್.ಐ ಸುಪ್ರೀತ್ ನೇತೃತ್ವದ ತಂಡ ದಾಳಿ ನಡೆಸಿದ್ದಾರೆ. ಈ ವೇಳೆ 140 ಗ್ರಾಂ ಒಣ ಗಾಂಜಾ ದೊರೆತಿದೆ. ನಂತರ ಗಾಂಜಾ ಸಹಿತ ಆರೋಪಿಯನ್ನು ವಶಕ್ಕೆ ಪಡಿಯಲಾಗಿದೆ.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕವಿತಾ. ಡಿ.ವೈ.ಎಸ್. ಪಿ ಧರ್ಮೇಂದ್ರ ಅವರ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಸುಪ್ರೀತ್ ಪ್ರಕರಣ ದಾಖಲಾಗಿದೆ.
ದಾಳಿ ಕಾಲದಲ್ಲಿ ಪಿ.ಎಸ್.ಐ ಸುಪ್ರೀತ್, ಎಸ್.ಎ.ಡಿ.ಎಸ್ ಪೂಜೇರಿ, ಎ.ಎಸ್.ಐ ಗೋವಿಂದ್, ಮನೋಹರ್, ದಿನೇಶ್, ಸಿದ್ದರಾಜು, ವಿಜಯ್ ಕುಮಾರ್ ಹಾಜರಿದ್ದರು.
