ಉದಯವಾಹಿನಿ, ಗೌರಿಬಿದನೂರು: ನಗರದಲ್ಲಿ ಸೋಮವಾರ ಮಧ್ಯಾಹ್ನ ಅರ್ಧ ಗಂಟೆ ಮಳೆ ಸುರಿಯಿತು. ನಗರದ ಬಸ್ ನಿಲ್ದಾಣ, ಮಾದನಹಳ್ಳಿ, ಕರೇಕಲ್ಲಹಳ್ಳಿ, ವಿ.ವಿ.ಪುರಂ ಸೇರಿದಂತೆ ಹಲವು ಕಡೆ ಆರಂಭವಾದ ಜೋರಾದ ಮಳೆ, ಬಿರುಗಾಳಿ ಜೊತೆಗೆ ಅಲಿಕಲ್ಲು ಸಹಿತವಾಗಿ ಸುರಿಯಿತು.
ಗ್ರಾಮಾಂತರ ಠಾಣೆ ಮುಂಭಾಗದ ಕೆಳ ಸೇತುವೆ ಸಂಪೂರ್ಣವಾಗಿ
ಜಲಾವೃತಗೊಂಡಿದ್ದರಿಂದ ವಾಹನ ಸವಾರರು ಮತ್ತು ಪಾದಚಾರಿಗಳು ಪರದಾಡಿದರು.
ನಗರದ ಹಲವು ಕಡೆ ಮರಗಳ ರೆಂಬೆ ಕೊಂಬೆಗಳು ನೆಲಕ್ಕೆ ಉರುಳಿದವು.
