ಉದಯವಾಹಿನಿ, ಕಲಬುರಗಿ: ಗಾಂಜಾ, ಮಾದಕ ದ್ರವ್ಯ ಹಾಗೂ ಮಾದಕ ಟ್ಯಾಬ್ಲೇಟ್‍ಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಎಕ್ಬಾಲ್ ಕಾಲೋನಿಯ ಮೊಹ್ಮದ್ ಮಸಿಯೋದ್ದೀನ್ ತಂದೆ ಮೊಹ್ಮದ್ ಮೈನೂದ್ದೀನ್ (30) ಎಂಬಾತನನ್ನು ಬಂಧಿಸಿ 10800 ಸ್ಟ್ರಿಪ್ಸ್ ಟ್ಯಾಬ್ಲೇಟ್, 240 ಬಾಟಲ್ ಸಿರಫ್, 105 ಗ್ರಾಂ.ಗಾಂಜಾ ಸೇರಿ 8.23 ಲಕ್ಷ ರೂ.ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ., ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ನಾಯಕ್ ಅವರ ಮಾರ್ಗದರ್ಶನದಲ್ಲಿ ಕಲಬುರಗಿ ದಕ್ಷಿಣ ಉಪ ವಿಭಾಗದ ಎಸಿಪಿ ಭೂತೇಗೌಡ ವಿ.ಎಸ್.ಅವರ ನೇತೃತ್ವದಲ್ಲಿ ರಾಘವೇಂದ್ರ ನಗರ ಪೊಲೀಸ್ ಠಾಣೆ ಪಿಐ ಕುಬೇರ ಎಸ್.ರಾಮಮಾನೆ, ಸಿಬ್ಬಂದಿಗಳಾದ ದತ್ತಾತ್ರೇಯ, ಮಲ್ಲನಗೌಡ, ಸಿಕ್ರೇಶ್ವರ, ರಾಜಕುಮಾರ, ಉಮೇಶ, ಮುಜಾಹಿದ, ಕರಣಕುಮಾರ, ಆರೇಶ, ಆತ್ಮಕುಮಾರ, ತುಕಾರಾಮ ಅವರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
