ಉದಯವಾಹಿನಿ, ಕೂಡ್ಲಿಗಿ : ಪಟ್ಟಣದ ಆರಾಧ್ಯ ದೈವ ಶ್ರೀ ಊರಮ್ಮದೇವಿಯ ಜಾತ್ರೆಯು 14 ವರ್ಷದ ನಂತರ ಜರುಗುತ್ತಿದ್ದೂ ಇದರ ನಿಮಿತ್ತ ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ಹಾಗೂ ಅರ್ಥಪೂರ್ಣವಾಗಿ ಜಾತ್ರೆ ಜರುಗಲು ಅಧಿಕಾರಿಗಳ, ವರ್ತಕರ ದೇವಸ್ಥಾನದ ದೈವಸ್ತರ ಹಾಗೂ ಪತ್ರಕರ್ತರೊಂದಿಗೆ ಚರ್ಚೆ ನಡೆಸಿ ಸಲಹೆ ನೀಡುವಂತೆ ಜಾತ್ರೆ ನಿಮಿತ್ತ ಪೂರ್ವ ಸಭೆಯನ್ನು ಕರೆಯಲಾಗಿದೆ ಎಂದು ಕೂಡ್ಲಿಗಿ ತಹಸೀಲ್ದಾರ್ ವಿ ಕೆ ನೇತ್ರಾವತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ಬೆಳಿಗ್ಗೆ 10ಗಂಟೆಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೂಡ್ಲಿಗಿ ಶಾಸಕರಾದ ಡಾ ಶ್ರೀನಿವಾಸ ಅವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆಯನ್ನು ಕರೆದಿದ್ದು ಇದೇ ಸಂದರ್ಭದಲ್ಲಿ ಪಟ್ಟಣದ ಆರಾಧ್ಯ ದೈವ ಶ್ರೀ ಊರಮ್ಮದೇವಿಯ ಜಾತ್ರೆಯ ಪೂರ್ವಭಾವಿ ಸಭೆ ಹಮ್ಮಿಕೊಂಡಿದ್ದು ಈ ಸಭೆಗೆ ತಾಲೂಕಿನ ಜನಪ್ರತಿನಿದಿಗಳು, ಸಂಘಸಂಸ್ಥೆ ಮುಖಂಡರು, ವರ್ತಕರು,ದೇವಸ್ಥಾನದ ದೈವಸ್ಥರು ಹಾಗೂ ಪತ್ರಿಕಾ ಮಾಧ್ಯಮದವರೊಂದಿಗೆ ಜಾತ್ರೆಯ ನಿಮಿತ್ತ ಶಾಂತಿ ಸುವ್ಯವಸ್ಥೆ ಹಾಗೂ ಆರ್ಥಪೂರ್ಣವಾಗಿ ಜಾತ್ರೆ ಜರುಗುವ ಕುರಿತು ಸಲಹೆ ಸೂಚನೆ ಪಡೆಯುವ ಮೂಲಕ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಈ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಕೂಡ್ಲಿಗಿ ತಹಸೀಲ್ದಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!