ಉದಯವಾಹಿನಿ, ಜಮ್ಮು : ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆಯಲ್ಲಿ ಸೇನಾ ಪಡೆಗಳ ಸನ್ನದ್ಧತೆಯನ್ನು ಪರಿಶೀಲಿಸಲು ಸೇನೆಯ ಪಶ್ಚಿಮ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಮನೋಜ್ ಕುಮಾರ್ ಕಟಿಯಾರ್ ಇಂದು ಕಥುವಾದ ಮುಂಚೂಣಿ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ.
ಈ ವರ್ಷದ ಮಾರ್ಚ್ ಮತ್ತು ಏಪ್ರಿಲ್ನಲ್ಲಿ ಭಯೋತ್ಪಾದಕರೊಂದಿಗಿನ ಹಲವಾರು ಎಂಟರ್‌ಗಳ ನಂತರ ನಿರಂತರ ಕಾರ್ಯಾಚರಣೆಗಳ ಹಿನ್ನೆಲೆಯಲ್ಲಿ ಲೆಫ್ಟಿನೆಂಟ್ ಜನರಲ್ ಕಟಿಯಾರ್ ಅವರ ಕಥುವಾ ಫಾರ್ವಡ್್ರ ಪ್ರದೇಶಗಳು ಮತ್ತು ಒಳನಾಡಿನ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ.
ಪಶ್ಚಿಮ ಕಮಾಂಡ್‌ನ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಮನೋಜ್ ಕುಮಾರ್ ಕಟಿಯಾರ್ ಅವರು ರೈಸಿಂಗ್ ಸ್ಟಾರ್ ಕಾರ್ಪ್ಪ ಕಾರ್ಯಾಚರಣೆಯ ಸನ್ನದ್ಧತೆಯನ್ನು ಪರಿಶೀಲಿಸಿದರು ಮತ್ತು ಕಥುವಾದ ಬನಿ-ಮಚೇಡಿಯ ಮುಂಚೂಣಿ ಪ್ರದೇಶಗಳಿಗೆ ಭೇಟಿ ನೀಡಿದರು ಎಂದು ವೆಸ್ಟರ್ನ್ ಕಮಾಂಡ್ ತಿಳಿಸಿದೆ.
ಭದ್ರತೆ ಮತ್ತು ನನ್ನದ್ದತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಸೈನಿಕರ ಅಚಲ ಸ್ಥಿರತೆ ಮತ್ತು ಅಸಾಧಾರಣ ವೃತ್ತಿಪರತೆಯನ್ನು ಅವರು ಶ್ಲಾಘಿಸಿದರು. ಜಮ್ಮುವಿನ ಕೆಲವು ಭಾಗಗಳು ಮತ್ತು ಅವಳಿ ಗಡಿ ಜಿಲ್ಲೆಗಳಾದ ಕಥುವಾ ಮತ್ತು ಸಾಂಬಾಗಳು 9 ಕಾಪ್ಸ್ ೯ ಮತ್ತು ಪಶ್ಚಿಮ ಕಮಾಂಡ್ ಕಾರ್ಯಾಚರಣೆಯ ಕಮಾಂಡ್ ಅಡಿಯಲ್ಲಿ ಬರುತ್ತವೆ. ಪಹಲ್ಲಾಮ್ ಘಟನೆ ನಂತರ ಅವರ ಭೇಟಿ ಇದೀಗ ಮಹತ್ವ ಪಡೆದುಕೊಂಡಿದೆ.

 

Leave a Reply

Your email address will not be published. Required fields are marked *

error: Content is protected !!