ಉದಯವಾಹಿನಿ, ಚನ್ನಮ್ಮನ ಕಿತ್ತೂರು : ತಾಲೂಕಿನ ಬಸರಕೋಡ ಗ್ರಾಮದಲ್ಲಿ ೧೩ ವರ್ಷಗಳ ನಂತರ ನಡೆಯುವ ಶ್ರೀ ಗ್ರಾಮದೇವಿ ಜಾತ್ರೆ. ಮೇ ೬ ರಿಂದ ೨೦ ರವರೆಗೆ ಜರುಗುವುದು.
೬ರಂದು ಶಾಸÀಕ ಬಾಬಾಸಾಹೇಬ ಪಾಟೀಲ ಚಾಲನೆ ನೀಡಲಿದ್ದಾರೆ. ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಯೋಗೀಂದ್ರ ಸ್ವಾಮಿಜೀ ಸಾನಿಧ್ಯ ವಹಿಸುವರು. ಮೇ ೬ ರಿಂದ ಮೇ ೧೦ರವರೆಗೆ ಸಂಜೆ ೦೪-೦೦ ಗಂಟೆಗೆ ದೇವಿಯರ ಹೊನ್ನಾಟ ದೇಗುಲಹಳ್ಳಿ ಶ್ರೀ ಗುರು ಮಡಿವಾಳೇಶ್ವರ ಮಠದ ವೀರೇಶ್ವರ ಸ್ವಾಮಿಜೀ ಚಾಲನೆ ನೀಡುವರು. ಮೇ೬ ರಿಂದ ೧೦ರವರೆಗೆ ನಿಚ್ಚಣಕಿ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮಿಜೀ ಪ್ರತಿದಿನ ಸಂಜೆ ೭ ಗಂಟೆಗೆ ದೇವಿ ಪುರಾಣ ಪ್ರವಚನ ನೀಡುವರು. ಮೇ ೧೬ ರಂದು ಸಂಜೆ ದೇವಿ ಸೀಮೋಲ್ಲಂಘಣ ಕಾರ್ಯಕ್ರಮ ನಡೆಯಲಿದ್ದು. ೨೦ ರಂದು ದೇವಿ ಪುರಾಣ ಪ್ರಾಣಪ್ರತಿಷ್ಠಾಪನೆ ಜರುಗಲಿದೆ.
ಮೇ ೬ ರಂದು ರಾತ್ರಿ ೧೦ ಗಂಟೆಗೆ ದ್ಯಾಮಣ್ಣಾ ಜ್ಯೋತ್ಯೆಣ್ಣವರ ಸಂಗಡಿಗರಿAದ ಡೊಳ್ಳಿನ ಪದಗಳು, ಮೇ೭ ರಂದು ರಾತ್ರಿ ೯ ಗಂಟೆಗೆ ಮಕ್ಕಳಿಂದ ಕಾರ್ಯಕ್ರಮ ಕಿತ್ತೂರು ಸಿಪಿಐ ಶಿವಾನಂದ ಗುಡಗನಟ್ಟಿ ಚಾಲನೆ ನೀಡಲಿದ್ದಾರೆ. ಮೇ ೮ ರಂದು ರಾತ್ರಿ ೯ ಸುಗಮಸಂಗೀತ ಇದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷಿö್ಮÃ ಹೆಬ್ಬಾಳ್ಕರ ಚಾಲನೆ ನೀಡಲಿದ್ದಾರೆ. ಅದೇ ದಿನ ರಾತ್ರಿ ೧೦ ಗಂಟೆಗೆ ನಮ್ಮೂರು ಗ್ರಾಮದೇವಿ ಜಾತ್ರೆ ವಿಶೇಷ ಕಾರ್ಯಕ್ರಮ ನಿವೃತ್ತ ಶಿಕ್ಷಕ ಡಿ.ಬಿ.ಹಿರೇಮಠ ಅಧ್ಯಕ್ಷತೆ, ಸಾಹಿತಿ ಸಿ.ಕೆ.ನಾವಲಗಿ ಉಪನ್ಯಾಸ ನೀಡುವರು. ಮೇ ೧೦ ರಂದು ರಾತ್ರಿ ೯ ಗಂಟೆಗೆ ದೇವಿ ಪುರಾಣ ಮಂಗಲ ಕಾರ್ಯಕ್ರಮ. ಮೇ ೧೧ ರಂದು ರಾತ್ರಿ ೯ ಗಂಟೆಗೆ ಹಾಸ್ಯ ರಸಮಂಜರಿ ಅಧ್ಯಕ್ಷತೆ ಶಾಸಕ ಬಾಬಾಸಾಹೇಬ ಪಾಟೀಲ ವಹಿಸುವರು. ಮೇ ೧೨ ರಾತ್ರಿ ೯ ಗಂಟೆಗೆ ಶರ್ಮಿಳಾ ಹಿರೇಮಠ ಅವರಿಂದ ರಸಮಂಜರಿ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಉದ್ಘಾಟಿಸುವರು. ಮೇ ೧೩ ರಾತ್ರಿ ೧೦-೩೦ಕ್ಕೆ ಗ್ರಾಮದ ಶ್ರೀ ಕಲ್ಮೇಶ್ವರ ನಾಟ್ಯ ಸಂಘದಿAದ ರೈತ ಹಚ್ಚಿದ ದೀಪ” ನಾಟಕ ಪ್ರದರ್ಶನ. ಮೇ ೧೪ ರಾತ್ರಿ ೧೦ ಗಂಟೆಗೆಸಂಗ್ಯಾ-ಬಾಳ್ಯಾ” ಡಬ್ಬಿನ ಆಟವನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸುವರು. ಮೇ ೧೫ ರಾತ್ರಿ ಕೀರ್ತನ ಕಾರ್ಯಕ್ರಮ ನಡೆಯಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.
