ಉದಯವಾಹಿನಿ, ಬೆಂಗಳೂರು: ಉಗ್ರರ ಅಡಗು ತಾಣಗಳ ಮೇಲೆ ಆಪರೇಷನ್ ಸಿಂಧೂರ ಹೆಸರಿನಲ್ಲಿ ದಾಳಿ ನಡೆಸಿದ ಹಿನ್ನಲೆಯಲ್ಲಿ ರಾಜ್ಯದಲ್ಲಿ ಇಂದು ಸಂಜೆ ಮಾಕ್ ಡ್ರಿಲ್ (ಅಣಕು ಕವಾಯತು) ನಡೆಯಲಿದೆ.
ನಗರದ ೩೫ ಕಡೆಗಳಲ್ಲಿ ಸೈರನ್ ಇದ್ದು, ೩೨ ಕಡೆ ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ ಸೈರನ್ ಕಾರ್ಯ ನಿರ್ವಹಿಸುವ ಕಡೆ ಮಾಕ್ ಡ್ರಿಲ್ ನಡೆಯಲಿದೆ.
ಇಂಡಿಯನ್ ಇನ್‌ಸ್ಟಿಟ್ಯೂಟ್, ಸಿಕ್ಯುಎಎಲ್, ಇಎಸ್‌ಐ ಆಸ್ಪತ್ರೆ, ಎನ್‌ಎಎಲ್, ಬೆಂಗಳೂರು ಡೈರಿ, ಕೆನರಾ ಬ್ಯಾಂಕ್,ಎಸ್ ಆರ್ ಎಸ್ ಪೀಣ್ಯ, ವಿವಿ ಟವರ್, ಜ್ಞಾನಭಾರತಿ, ಥಣಿಸಂದ್ರ, ಬಾಣಸವಾಡಿ, ಯಶವಂತಪುರ, ಬನಶಂಕರಿ, ರಾಜಾಜಿನಗರ, ಚಾಮರಾಜಪೇಟೆ,ಗೃಹರಕ್ಷಕದಳ ಕೇಂದ್ರ ಕಚೇರಿ, ಪೀಣ್ಯ, ಬೆಂಗಳೂರು ಗ್ರಾಮಾಂತರ ಗೃಹರಕ್ಷಕದಳ ಕಚೇರಿ, ಬಾಗಲೂರು,, ಅಂಜನಾಪುರ,ಐಟಿಪಿಎಲ್, ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ ಮತ್ತು ಡೈರಿ ಸರ್ಕಲ್ ಅಗ್ನಿಶಾಮಕ ಠಾಣೆಗಳು,
ಕಮರ್ಷಿಯಲ್ ಸ್ಟ್ರೀಟ್, ಹಲಸೂರು ಗೇಟ್, ಹಲಸೂರು,ಉಪ್ಪಾರಪೇಟೆ ರಾಜರಾಜೇಶ್ವರಿ ನಗರ, ಕಾಮಾಕ್ಷಿಪಾಳ್ಯ, ಕೆ.ಆರ್.ಮಾರ್ಕೆಟ್ , ವೈಯಾಲಿಕಾವಲ್? ಪೊಲೀಸ್ ಠಾಣೆಗಳ ಬಳಿ ಸೈರನ್ ಮೊಳಗಲಿದೆ. ಮಾಕ್ ಡ್ರಿಲ್ ನಲ್ಲಿ ಸೈರನ್ ಹಾಕಲಾಗುತ್ತದೆ. ಮೂರು ಹಂತದಲ್ಲಿ ಸೈರನ್ ಆನ್ ಮಾಡಲಾಗುತ್ತದೆ. ಸೈರನ್ ಸಹ ಮೂರು ರೀತಿಯ ಶಬ್ದ ಮಾಡುತ್ತದೆ. ಈ ಸೈರನ್ ಸುಮಾರು ೩ ಕಿ.ಮೀ. ವ್ಯಾಪ್ತಿಯವ ವರೆಗೂ ಕೇಳಲಿದೆ.

Leave a Reply

Your email address will not be published. Required fields are marked *

error: Content is protected !!