ಉದಯವಾಹಿನಿ, ನವದೆಹಲಿ: ಭಾರತದ ಏರ್‌ಸ್ಟೈಕ್ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದೆ ಎಂದು ಎಎಫ್‌ ಪಿ ವರದಿ ಮಾಡಿದೆ. ಪಾಕಿಸ್ತಾನದ ಐಎಸ್ಪಿಆರ್‌ನ ಮಹಾ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಭಾರತದ ದಾಳಿಯನ್ನು ದೃಢಪಡಿಸಿದ್ದು, ಭಾರತವು ಕೋಟಿ, ಮುರಿಡೈ, ಬಹವಾಲ್ಟುರ್ ಮತ್ತು ಮುಜಫರಾಬಾದ್‌ಗಳಲ್ಲಿ ದಾಳಿ ನಡೆಸಿದೆ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಭಾರತ ನಿಖರವಾದ ಮಿಲಿಟರಿ ದಾಳಿಗಳನ್ನು ನಡೆಸಿದೆ ಎಂದು ದೃಢಪಡಿಸಿದ್ದು, ಭಾರತದ ದಾಳಿಗೆ ಪ್ರತಿಕ್ರಿಯಿಸಲು ಪಾಕಿಸ್ತಾನಕ್ಕೆ ಎಲ್ಲ ಹಕ್ಕಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಮೇಲೆ ದಾಳಿ ಮಾಡಿದ ನಂತರ, ವಾಯುಪಡೆಯು ದೆಹಲಿ ಎನ್‌ಸಿಆರ್ ನಲ್ಲಿ ತನ್ನ ಫೈಟರ್ ಜೆಟ್‌ಗಳ ಮೂಲಕ ಸೋನಿಕ್ ಬೂಮ್ (ಸ್ಫೋಟದ ಶಬ್ದ) ದೊಂದಿಗೆ ಸೇಡು ತೀರಿಸಿಕೊಳ್ಳಲಾಗಿದೆ ಎಂದು ಘೋಷಣೆ ಮಾಡಿದೆ. ಪಹಲ್ಟಾಮ್ ದಾಳಿ ಪ್ರತೀಕಾರವಾಗಿ ಕಾಯುತ್ತಿದ್ದೆವು. ಇದೀಗ ಸಮಯ ಬಂತು. ಭಾರತದ ಸೇಡು ತೀರಿಸಿಕೊಂಡಿದ್ದೇವೆ. ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ದೇವೆ ಎಂದು ಹೇಳಿದೆ.
ಭಾರತ ದಾಳಿ ಮಾಡಿದ ಎಲ್ಲಾ ಸ್ಥಳಗಳು ನಾಗರಿಕ ಸ್ಥಳಗಳಾಗಿವೆ. ಈ ದಾಳಿಯಲ್ಲಿ ಎರಡು ಮಸೀದಿಗಳೂ ಸೇರಿವೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್ ತಿಳಿಸಿದ್ದಾರೆ.ಭಯೋತ್ಪಾದಕರ ಶಿಬಿರಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ ಎಂದು ಭಾರತ ಹೇಳಿದೆ. ಜಗತ್ತಿಗೆ ಭಾರತವು ಸುಳ್ಳು ಮಾಹಿತಿಯನ್ನು ನೀಡುತ್ತಿದೆ ಎಂದು ಆಸಿಫ್ ಆರೋಪಿಸಿದ್ದಾರೆ. ಭಾರತ ಸೇನೆಗೆ ಸೇರಿದ ಮೂರು ಡೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಪಾಕಿಸ್ತಾನದ ಮಾಹಿತಿ ಸಚಿವ ಅಲ್ಲಾ ತರ್ರಾ ಹೇಳಿಕೊಂಡಿದ್ದಾರೆ. ಭಾರತದ ಆಕ್ರಮಣಕ್ಕೆ ಪಾಕಿಸ್ತಾನ ಸೂಕ್ತವಾಗಿ ಪ್ರತ್ಯುತ್ತರ ನೀಡಿದೆ ಎಂದು ತರಾರ್ ಎಕ್ಸ್‌ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!