ಉದಯವಾಹಿನಿ, ರಾಯಚೂರು: ಕನ್ನಡದ ಬಿಗ್‌ಬಾಸ್ ಸೀಸನ್ 11ರ ಸ್ಪರ್ಧಿ ಗೋಲ್ಡ್ ಸುರೇಶ್ ವಿರುದ್ಧ ಲಕ್ಷ ಲಕ್ಷ ಹಣ ವಂಚನೆ ಆರೋಪ ಕೇಳಿಬಂದಿದೆ. ಕೇಬಲ್ ಚಾನೆಲ್ ಸೆಟ್‌ಅಪ್ ಮಾಡಿಕೊಡುವುದಾಗಿ ಹೇಳಿ ವಂಚನೆ ಮಾಡಿದ್ದಾರೆಂದು ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದ ಮೈನುದ್ದಿನ್ ಎಂಬುವವರು ಗಂಭೀರ ಆರೋಪ ಮಾಡಿದ್ದಾರೆ. 14 ಲಕ್ಷ ರೂ. ಅಗ್ರೀಮೆಂಟ್, ಹಣ ವಾಪಸ್ ಮಾಡದ ಆರೋಪ ಮಾನ್ವಿ ಪಟ್ಟಣದ ಮೈನುದ್ದಿನ್, ಸುರೇಶ್ ಅವರು ಕೇಬಲ್ ಚಾನೆಲ್ನ ಸೆಟಅಪ್ ಮಾಡಿಕೊಡುವುದಾಗಿ ಹೇಳಿದ್ದರು. ಬರೋಬ್ಬರಿ 14 ಲಕ್ಷಕ್ಕೆ ಒಪ್ಪಂದ ಆಗಿತ್ತು. ಅಲ್ಲದೆ ಸುರೇಶ್ 4 ಲಕ್ಷ ರೂಪಾಯಿ ಮುಂಗಡ ಪಡೆದಿದ್ದರು. ಆ ಬಳಿಕ ಹಂತ ಹಂತವಾಗಿ 7 ಲಕ್ಷ ರೂಪಾಯಿ ಪಡೆದುಕೊಂಡಿದ್ದರು. 2017ರಲ್ಲಿ ಇಬ್ಬರ ಮಧ್ಯೆ ಒಪ್ಪಂದ ನಡೆದಿತ್ತು. ಆದರೆ, ಆ ಬಳಿಕ ಅರೆಬರೆ ಕೆಲಸ ಮಾಡಿ ಸುರೇಶ್ ಅರ್ಧಕ್ಕೆ ಬಿಟ್ಟರು. ಇದಾದ ಬಳಿಕ 2017ರಲ್ಲೇ 1 ಲಕ್ಷ ರೂ. ಹಣ ವಾಪಸ್ ಪಡೆಯಲಾಗಿತ್ತು. ಆ ನಂತರ ಸುರೇಶ್ ನನ್ನ ಮತ್ತು ಸ್ನೇಹಿತನ ಸಂಪರ್ಕಕ್ಕೇ ಸಿಕ್ಕಿರಲಿಲ್ಲ ಎಂದು ಮೈನುದ್ದೀನ್ ಆರೋಪಿಸಿದ್ದಾರೆ.
