ಉದಯವಾಹಿನಿ, ಸೋಷಿಯಲ್‌ ಮೀಡಿಯಾದಲ್ಲಿ ಸದಾ ಆಕ್ಟೀವ್‌ ಆಗಿರುವ ನಟಿಯರಲ್ಲಿ ಖುಷಿ ಮುಖರ್ಜಿ ಕೂಡ ಒಬ್ಬರು. ಸದಾ ತುಂಡುಡುಗೆ ತೊಟ್ಟು ಸದ್ದು ಮಾಡುತ್ತಿರು ಬೆಡಗಿ ಎಂದೇ ಹೇಳಬಹುದು. ಇದೀಗ ತಮ್ಮ ವಿರುದ್ಧ ಕೇಳಿಬರ್ತಿದ್ದ ನೆಗೆಟಿವ್‌ ಕಾಮೆಂಟ್‌ಗಳಿಗೆ ನಟಿ ಹನುಮಾನ್‌ ಚಾಲಿಸಾ ಪಠಿಸುವ ಮೂಲಕ ತಿರುಗೇಟು ಕೊಟ್ಟಿದ್ದಾರೆ. ಮ್ಮ ಇನ್‌ಸ್ಟಾ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ನಟಿ, ನಾನು ಬಂಗಾಳಿ ಬ್ರಾಹ್ಮಣ ಕುಟುಂಬದಿಂದ ಬಂದವಳು. ನಮ್ಮ ಸಂಸ್ಕೃತಿಯ ನಿಯಮಗಳೆಲ್ಲವೂ ಗೊತ್ತಿದೆ. ಎಲ್ಲ ವಿಷಯಗಳ ಬಗ್ಗೆಯೂ ಒಂದಿಷ್ಟು ಜ್ಞಾನ ಇರಬೇಕು. ಅದು ನನಗೂ ಇದೆ ಎಂದಿದ್ದಾರೆ. ಈ ವೇಳೆ ಸುಮಾರು 2-3 ನಿಮಿಷಗಳ ಕಾಲ ಹನುಮಾನ್‌ ಚಾಲೀಸಾ ಪಠಿಸಿ ನನಗೂ ಸಂಸ್ಕೃತಿಯ ಬಗ್ಗೆ ಅರಿವಿದೆ ಅನ್ನೋದಕ್ಕೆ ಇದನ್ನು ಪಠಿಸಿದ್ದೇನೆ ಎಂದು ಹೇಳಿದ್ದಾರೆ.
ಅಲ್ಲದೇ ಕೆಲವರು ಈಗಲೂ ನನ್ನನ್ನ ಟ್ರೋಲ್‌ ಮಾಡ್ತಿದ್ದಾರೆ. ಆದ್ರೆ ಒಂದು ನೆನಪಿಟ್ಟುಕೊಳ್ಳಿ. ಯಾವುದೋ ಟೈಪ್‌ ಬಟ್ಟೆ ಹಾಕಿದಾಕ್ಷಣ ನಮ್ಮ ಸಂಸ್ಕೃತಿ, ನಾನು ಎಲ್ಲಿಂದ ಬಂದವಳು ಅನ್ನೋದನ್ನ ಮರೆತಿದ್ದೀನಿ ಎಂದಲ್ಲ. ಅದು ನನ್ನ ಫ್ಯಾಷನ್‌ ಅಷ್ಟೇ ಅಂದಿದ್ದಾರೆ ಎಂದು ಟ್ರೋಲ್‌ಗಳಿಗೆ ಉತ್ತರಿದ್ದಾರೆ.
ಇತ್ತೀಚೆಗೆ ಮುಂಬೈನಲ್ಲಿ ಕಾರ್ಯಕ್ರಮವೊಂದಕ್ಕೆ ಒಳಉಡುಪು ಧರಿಸದೇ ಇರೋದು ಕಾಣಿಸುವಂತಹ ಟ್ರಾನ್ಸ್‌ಪರೆಂಟ್‌ ಡ್ರೆಸ್‌ ತೊಟ್ಟು ಫೋಟೋಗೆ ಪೋಸ್‌ ಕೊಟ್ಟಿದ್ದರು. ಅದಕ್ಕೂ ಮುನ್ನ ಗೋಲ್ಡನ್‌ ಕಲ್ಲರ್‌ ತುಂಡು ಬಟ್ಟೆ ಧರಿಸಿದ್ದ ವಿಡಿಯೋ ಹಂಚಿಕೊಂಡಿದ್ದರು. ಇತ್ತೀಚೆಗೆ ಒಳ ಉಡುಪು ಧರಿಸದ ತುಂಡು ಉಡುಗೆ ತೊಟ್ಟ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಟ್ರೆಂಡ್‌ ಆಗಿತ್ತು. ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳ ಕಣ್ಣುಕುಕ್ಕುವಂತೆ ಮಾಡಿತ್ತು. ಕೆಲ ನೆಟ್ಟಿಗರು ನಟಿಯ ಬೋಲ್ಡ್‌ ಅವತಾರಕ್ಕೆ ʻವಾವ್‌ ಎಷ್ಟು ಸೆಕ್ಸಿʼ ಅಂತಾ ಕಾಮೆಂಟ್‌ ಮಾಡಿದ್ರೆ ಇನ್ನೂ ಕೆಲವರು ಇನ್ನೂ ಸ್ವಲ್ಪ ಚೋಟುದ್ದ ಡ್ರೆಸ್‌ ತೊಟ್ಟಿದ್ರೆ ಮಜಾ ಇರ್ತಿತ್ತು, ನಾನೇ ಒಳಉಡುಪು ಕೊಡಿಸಲೇ? ಅಂತೆಲ್ಲಾ ಕಾಮೆಂಟ್‌ ಮಾಡಿದ್ದರು. ಇನ್ನೂ ಕೆಲವರು ನಟಿಯನ್ನ ಟ್ರೋಲಿಗೆಳೆದಿದ್ದರು.

Leave a Reply

Your email address will not be published. Required fields are marked *

error: Content is protected !!