ಉದಯವಾಹಿನಿ, ವಾಷಿಂಗ್ಟನ್: ಅಮೆರಿಕದಿಂದ ಎಲೋನ್ ಮಸ್ಕ್ ಅವರನ್ನು ಗಡಿಪಾರು ಮಾಡಲಾಗುತ್ತಾ ಹೀಗೊಂದು ಪ್ರಶ್ನೆ ಎದ್ದಿದೆ. ಈ ಪ್ರಶ್ನೆ ಏಳಲು ಕಾರಣ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾಡಿದ ಒಂದು ಪೋಸ್ಟ್.
ವಾಷಿಂಗ್ಟನ್: ಅಮೆರಿಕದಿಂದ ಎಲೋನ್ ಮಸ್ಕ್ ಅವರನ್ನು ಗಡಿಪಾರು ಮಾಡಲಾಗುತ್ತಾ ಹೀಗೊಂದು ಪ್ರಶ್ನೆ ಎದ್ದಿದೆ. ಈ ಪ್ರಶ್ನೆ ಏಳಲು ಕಾರಣ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾಡಿದ ಒಂದು ಪೋಸ್ಟ್.
ನಮ್ಮ ಸಬ್ಸಿಡಿ ಇಲ್ಲದಿದ್ದರೆ ಎಲಾನ್ ಮಸ್ಕ್ ಅಂಗಡಿ ಮುಚ್ಚಿ ದಕ್ಷಿಣ ಆಫ್ರಿಕಾಗೆ ಹೋಗಬೇಕಾಗುತ್ತದೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಮಸ್ಕ್ ಅವರನ್ನು ಗಡಿಪಾರು ಮಾಡಬಹುದೇ ಎಂದು ವರದಿಗಾರರು ಕೇಳಿದ್ದಕ್ಕೆ ಟ್ರಂಪ್ “ನನಗೆ ಗೊತ್ತಿಲ್ಲ, ನಾವು ನೋಡಬೇಕು ಎಂದು ಉತ್ತರಿಸಿದ್ದಾರೆ. ಅಮೆರಿಕದಲ್ಲಿ ಹೊಸ ಪಕ್ಷ ಕಟ್ಟುವ ಬಗ್ಗೆ ಎಚ್ಚರಿಕೆ ನೀಡಿದ್ದಕ್ಕೆ ಟ್ರಂಪ್, ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಅನುಮೋದಿಸುವ ಮೊದಲೇ ಅವರಿಗೆ ನಾನು ಇವಿ ಆದೇಶವನ್ನು ಬಲವಾಗಿ ವಿರೋಧಿಸುತ್ತೇನೆ ಎನ್ನುವುದು ಅವರಿಗೆ ತಿಳಿದಿತ್ತು ಎಂದು ಕುಟುಕಿದ್ದಾರೆ.
ಇವಿ ವಿರೋಧಿಸುವುದು ನನ್ನ ಅಭಿಯಾನದ ಒಂದು ಭಾಗವಾಗಿತ್ತು. ಈಗ ಈ ನಿರ್ಧಾರವನ್ನು ವಿರೋಧಿಸುವುದು ಹಾಸ್ಯಾಸ್ಪದವಾಗಿದೆ. ಇತಿಹಾಸದಲ್ಲಿ ಮಸ್ಕ್‌ಗಿಂತ ಯಾರು ಅತಿ ಹೆಚ್ಚು ಸಬ್ಸಿಡಿ ಪಡೆದಿರಲಾರರು. ಸಬ್ಸಿಡಿ ಇಲ್ಲದೇ ಇದ್ದರೆ ಮಸ್ಕ್ ತಮ್ಮ ಅಂಗಡಿ ಮುಚ್ಚಿ ದಕ್ಷಿಣ ಆಫ್ರಿಕಾಗೆ ಹೋಗಬೇಕಾಗಿತ್ತು. ಇನ್ನು ಮುಂದೆ ರಾಕೆಟ್ ಉಡಾವಣೆಗಳು, ಉಪಗ್ರಹಗಳು ಅಥವಾ ಎಲೆಕ್ಟ್ರಿಕ್ ಕಾರು ಉತ್ಪಾದನೆ ಇರುವುದಿಲ್ಲ. ನಾವು ಬಹಳಷ್ಟು ಹಣವನ್ನು ಉಳಿಸಬೇಕು ಎಂದು ಬರೆದಿದ್ದಾರೆ.
