ಉದಯವಾಹಿನಿ, ಟೋಕಿಯೊ: ಚೀನಾ ತನ್ನ ಫೈಟರ್‌ ಜೆಟ್‌ಗಳನ್ನು ಜಪಾನಿನ ಗುಪ್ತಚರ ಸಂಗ್ರಹಣಾ ವಿಮಾನಗಳ ಹತ್ತಿರ ಅಸಹಜವಾಗಿ ಹಾರಿಸುವುದನ್ನು ನಿಲ್ಲಿಸುವಂತೆ ಎಚ್ಚರಿಕೆ ನೀಡಿದೆ. ಇದು ಪದೇ ಪದೇ ನಡೆಯುತ್ತಿದೆ ಇದನ್ನು ನಿಲ್ಲಿಸದಿದ್ದರೆ ಘರ್ಷಣೆಗೆ ಕಾರಣವಾಗಬಹುದು ಎಂದು ಅದು ಜಪಾನ್‌ ಹೇಳಿದೆ. ಜಪಾನ್‌ ವಾಯುಪಡೆಯ ಎಲೆಕ್ಟ್ರಾನಿಕ್‌ಗುಪ್ತಚರ ವಿಮಾನದ (98 ಅಡಿ) ಹತ್ತಿರದಲ್ಲಿ ಚೀನಾದ -ಎಫ್‌ 7 ಫೈಟರ್‌ ಬಾಂಬರ್‌ ಜೆಟ್‌ ಹಾರಾಟ ನಡೆಸಿದೆ ಎಂದು ಹೇಳಿದೆ ಜಪಾನ್‌ನ ರಕ್ಷಣಾ ಸಚಿವಾಲಯ ತಿಳಿಸಿದೆ. ಪೂರ್ವ ಚೀನಾ ಸಮುದ್ರದ ಜಪಾನಿನ ವಾಯುಪ್ರದೇಶದ ಹೊರಗೆ ಈ ಘಟನೆ ಸಂಭವಿಸಿದೆ. ಜಪಾನಿನ ಭಾಗಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಸಚಿವಾಲಯ ಹೇಳಿದೆ.ಇದರ ಬಗ್ಗೆ ಚೀನಾ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಚೀನಾದ ಸಾಮಾನ್ಯ ಮಿಲಿಟರಿ ಚಟುವಟಿಕೆಯ ಮೇಲೆ ಬೇಹುಗಾರಿಕೆ ನಡೆಸುತ್ತಿದೆ ಎಂದು ಬೀಜಿಂಗ್‌ ಆರೋಪಿಸಿದೆ ಮತ್ತು ಆದರೆ ಜಪಾನ್‌ ಇದನ್ನು ನಿರಾಕರಿಸಿದೆ ಮತ್ತು ತನ್ನ ಆಕ್ರಮಣಾ ಕ್ರಮಗಳನ್ನು ನಿಲ್ಲಿಸುವಂತೆ ಒತ್ತಾಯಿಸಿದೆ. ವಿಶೇಷವಾಗಿ ಜಪಾನ್‌ನ ನೈಋತ್ಯ ಪ್ರದೇಶಗಳಲ್ಲಿ ಚೀನಾ ತನ್ನ ಮಿಲಿಟರಿ ನಿರ್ಮಾಣವನ್ನು ವೇಗಗೊಳಿಸುತ್ತಿರುವ ಬಗ್ಗೆ ಜಪಾನ್‌ ಕಳವಳ ವ್ಯಕ್ತಪಡಿಸಿದೆ.ತಡರಾತ್ರಿ ಜಪಾನ್‌ ವಿದೇಶಾಂಗ ಸಚಿವಾಲಯದ ಉಪ ಸಚಿವ ಟಕೆಹಿರೊ ಫುನಕೋಶಿ ಜಪಾನ್‌ನಲ್ಲಿರುವ ಚೀನಾ ರಾಯಭಾರಿ ವೂ ಜಿಯಾಂಗ್‌ಹಾವೊ ಅವರಿಗೆ ಆಕಸಿಕ ಘರ್ಷಣೆಗೆ ಕಾರಣವಾಗುವ ಇಂತಹ ಚಟುವಟಿಕೆಯನ್ನು ನಿಲ್ಲಿಸುವಂತೆ ಬೀಜಿಂಗ್‌ ಅನ್ನು ಬಲವಾಗಿ ವಿನಂತಿಸಿದ್ದಾರೆ ಮತ್ತು ಇದೇ ರೀತಿಯ ಕ್ರಮಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳುವಂತೆ ಚೀನಾವನ್ನು ಬಲವಾಗಿ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!