ಉದಯವಾಹಿನಿ, ಬಾಳೆಯ ಹಣ್ಣನ್ನು (Banana)ತಿನ್ನುವುದಕ್ಕೆ ಇಂಥದ್ದೇ ಕಾರಣ ಬೇಕಿಲ್ಲ. ದೇವರ ಪ್ರಸಾದದ್ದು, ತಾಂಬೂಲದ ಜೊತೆಗಿನದ್ದು, ತಮ್ಮದೇ ತೋಟದ್ದೆಂದು ಯಾರೋ ಕೊಟ್ಟಿದ್ದು, ನಾವೇ ಅಂಗಡಿ ಯಿಂದ ತಂದಿದ್ದು, ಇಷ್ಟವೆಂದು ಮೆಂದಿದ್ದು, ಹಸಿವು ತಣಿಸಲು ತಿಂದಿದ್ದು, ಕ್ರೀಡೆಯ ನಡು ವಿನ ಬ್ರೇಕ್‌ನಲ್ಲಿ, ಬೆಳಗಿನ ವ್ಯಾಯಾಮದ ಮೊದಲಿನ ಶಕ್ತಿ ಸಂಚಯನಕ್ಕೆ, ಮ್ಯಾರಾಥಾನ್‌ ಓಡುವಾಗ ಕಾಲಿಗೆ ಬಲ ನೀಡಲು, ಮಲಬದ್ಧತೆ ನಿವಾರಣೆಗೆ… ಕಾರಣಗಳು ಏನು ಬೇಕಿದ್ದರೂ ಆಗಬಹುದು.

ತಪ್ಪೇನಿಲ್ಲ ಬಿಡಿ. ಮಧುಮೇಹದ ಕಾಟವಿಲ್ಲ ಎಂದಾದರೆ ದಿನಕ್ಕೆ ಒಂದೆರಡು ಬಾಳೆಹಣ್ಣು ಮೆಲ್ಲು ವುದು ವಿಷಯವೇ ಅಲ್ಲ. ಅಷ್ಟೊಂದು ಪೌಷ್ಟಿಕವಾದ, ಹೆಚ್ಚು ದುಬಾರಿಯಲ್ಲದೆ, ಎಲ್ಲರ ಕೈಗೆಟು ಕುವಂಥ ಆಹಾರ ಎನಿಸಿಕೊಂಡಿರುವ ಬಾಳೆಹಣ್ಣು ಎಲ್ಲರಿಗೂ ಅಚ್ಚುಮೆಚ್ಚಾಗಿರುವುದರಲ್ಲಿ ಅಚ್ಚರಿಯೇನಿಲ್ಲ. ಶರ್ಕಪಿಷ್ಟ, ನಾರು, ವಿಟಮಿನ್‌ಗಳು, ಖನಿಜಗಳು ಎಲ್ಲವೂ ಇರುವಂಥ ಈ ಹಣ್ಣು ತಿಂದಿದ್ದು ಅತಿಯಾದರೆ ಸಮಸ್ಯೆಗಳು ಕಾಡಬಹುದೇ? ಅತಿಯಾದರೆ ಅಮೃತವೂ ವಿಷ ಎಂಬಂತೆ, ಅತಿಯಾಗಿ ತಿಂದರೆ ಬಾಳೆಯೂ ಬವಣೆ ತರಬಹುದೇ? ಅದಕ್ಕೂ ಮೊದಲು ಬಾಳೆಯ ವಿವರಗಳನ್ನು ಗಮನಿಸೋಣ.

ಏನಿವೆ ಪೌಷ್ಟಿಕಾಂಶಗಳು? ಸತ್ವಗಳ ಖನಿ ಎಂದೇ ಕರೆಸಿಕೊಂಡಿದೆ ಬಾಳೆಯ ಹಣ್ಣು. ಫ್ಲೆವ ನಾಯ್ಡ್‌, ಕೆರೊಟಿನಾಯ್ಡ್‌ ಸೇರಿದಂತೆ ಹಲವು ರೀತಿಯ ಉತ್ಕರ್ಷಣ ನಿರೋಧಕಗಳು ಬಾಳೆ ಹಣ್ಣಿ ನಲ್ಲಿವೆ. ಹಾಗಾಗಿ ಮೊದಲ ಸುತ್ತಿಗೇ ಇದು ಆರೋಗ್ಯಕ್ಕೆ ಉಪಕಾರಿ ಎನಿಸಿಬಿಡುತ್ತದೆ. ವಿಟಮಿನ್‌ ಸಿ, ವಿಟಮಿನ್‌ ಬಿ6 ನಂಥ ಜೀವಸತ್ವಗಳು ಜೀವಕ್ಕೆ ಹಿತ ಎನಿಸಿದರೆ, ನಾರು ಜೀರ್ಣಾಂಗಗಳ ದೇಖರೇಖಿ ನೋಡಿಕೊಳ್ಳುತ್ತದೆ. ಪೊಟಾಶಿಯಂ ಸಹ ಹೇರಳವಾಗಿ ಇರು ವುದರಿಂದ ರಕ್ತದೊತ್ತಡ ಏರಿಳಿ ಯದಂತೆ ನಿರ್ವಹಣೆಗೂ ಇದು ನೆರವು ನೀಡುತ್ತದೆ. ಹಾಗಾಗಿ ಹೃದಯದ ಆರೋಗ್ಯಕ್ಕೂ ಇದು ಒಳ್ಳೆಯದು. ಸಕ್ಕರೆ ಮತ್ತು ಪಿಷ್ಟದ ಅಂಶಗಳು ಇದ್ದರೂ, ನಾರು ಸಾಕಷ್ಟು ಇರುವುದರಿಂದ ಹೆಚ್ಚು ಕಾಲ ಹೊಟ್ಟೆ ತುಂಬಿದಂತಿರುವ ಭಾವನೆ ಮೂಡಿಸಬಹುದು ಈ ಹಣ್ಣು. ಇಷ್ಟಲ್ಲಾ ಸದ್ಗುಣಗಳು ಇದರಲ್ಲಿ ಇದ್ದ ಮೇಲೆ, ಸ್ವಲ್ಪ ಹೆಚ್ಚು ತಿಂದರೆ ತಪ್ಪೇನು ಎಂಬ ಪ್ರಶ್ನೆ ಮೂಡಿದರೆ- ಅದು ಸಹಜ. ಆದರೆ…

ಒಳ್ಳೆಯದೆಂಬ ಕಾರಣಕ್ಕೆ ಬಾಳೆಹಣ್ಣನ್ನು ಅತಿಯಾಗಿ ತಿಂದರೆ, ಅದರಿಂದ ತೊಂದರೆಗಳು ಅಮರಿಕೊಳ್ಳಬಹುದು ಎನ್ನುತ್ತಾರೆ ತಜ್ಞರು. ಇದೀಗ ಒಂದೆರಡು ಹಣ್ಣುಗಳಿಗೆ ತೊಂದ ರೆಯಿಲ್ಲ, ಆದರೆ ದಿನವೂ ನಾಲ್ಕಾರು ಹಣ್ಣುಗಳನ್ನು ಗುಳುಂ ಮಾಡಿದರೆ… ಕೆಲವೊಂದು ಸಣ್ಣ ತೊಂದರೆಗಳಿಂದ ಹಿಡಿದು, ದೊಡ್ಡ ಸಮಸ್ಯೆಗಳವರೆಗೂ ಬರುವ ಸಾಧ್ಯತೆಗಳನ್ನು ಪೌಷ್ಟಿಕಾಂಶ ಪರಿಣತರು ತಳ್ಳಿ ಹಾಕುವುದಿಲ್ಲ.

ಮೈಗ್ರೇನ್‌ ಅತಿಯಾದ ಮೈಗ್ರೇನ್‌ ತಲೆನೋವಿನ ಸಮಸ್ಯೆ ಇರುವವರಿಗೆ ವಿಪರೀತ ಬಾಳೆಹಣ್ಣು ತಿನ್ನುವುದು ಇನ್ನಷ್ಟು ತಲೆನೋವಿಗೆ ಕಾರಣವಾಗುತ್ತದೆ. ಅದರಲ್ಲೂ, ಸರಿಯಾಗಿ ಸಿಪ್ಪೆ ಸುಲಿ ಯದಿದ್ದರೆ, ಅದರಲ್ಲಿರುವ ಟೈರಮಿನ್‌ ಅಂಶವು ಹೊಟ್ಟೆ ಸೇರುತ್ತದೆ. ಇದರಿಂದ ಮೈಗ್ರೇನ್‌ ಕೆದರುವ ಸಾಧ್ಯತೆ ಹೆಚ್ಚು. ಈ ಟೈರಮಿನ್‌ ಅಂಶವನ್ನು ವಿಘಟಿಸಿ, ದೇಹದಿಂದ ಹೊರಗೆ ದಾಟಿಸುವ ರಾಸಾ ಯನಿಕಗಳು ಮೈಗ್ರೇನ್‌ ಸಮಸ್ಯೆ ಇರುವವರಲ್ಲಿ ಕಡಿಮೆಯಾದ್ದರಿಂದ, ಈ ಬಗ್ಗೆ ಎಚ್ಚರ ವಹಿಸುವುದು ಒಳಿತು.

Leave a Reply

Your email address will not be published. Required fields are marked *

error: Content is protected !!