ಉದಯವಾಹಿನಿ, ನವದೆಹಲಿ: ವಿಶ್ವದ ಅತ್ಯಂತ ಶ್ರೀಮಂತ ಕುಟುಂಬಗಳ ಸಾಲಿನಲ್ಲಿ ಅನಂತ್ ಅಂಬಾನಿ ಕುಟುಂಬ ಕೂಡ ಒಂದಾಗಿದೆ. ಅವರ ಕುಟುಂಬದಲ್ಲಿ ಯಾವುದೇ ಕಾರ್ಯಕ್ರಮವಾದರೂ ಅದು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತದೆ. ಅಂತೆಯೇ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ವಾರ್ಷಿಕೋತ್ಸವಕ್ಕೆ ಒಂದು ವರ್ಷ ಪೂರೈಸಿದ್ದು ಈ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಅಂಬಾನಿ ಕುಟುಂಬ ಆಯೋಜಿಸಿದೆ. ಕಳೆದ ವರ್ಷ ಮೂರು ದಿನಗಳ ಅದ್ಧೂರಿ ಮದುವೆ ಕಾರ್ಯ ಕ್ರಮಕ್ಕೆ ದೇಶ ವಿದೇಶದ ಗಣ್ಯರು ಆಗಮಿಸಿದ್ದರು. ಮದುವೆ ಪೂರ್ವ ಕಾರ್ಯಕ್ರಮದಿಂದ ಹಿಡಿದು ಎಲ್ಲವೂ ಬಹಳ ಅದ್ಧೂರಿ ಯಾಗಿಯೇ ನೆರವೇರಿತ್ತು. ಇದೀಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ವಾರ್ಷಿಕೋತ್ಸವಕ್ಕೆ ಒಂದು ವರ್ಷ ಪೂರೈಸಿದ್ದು ಬಾಲಿವುಡ್ ನ ಅನೇಕ ಗಣ್ಯರು ಅನಂತ್ ಅಂಬಾನಿ ದಂಪತಿಗಳಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯ ತಿಳಿಸಿದ್ದಾರೆ.
ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಮತ್ತು ನಟ ರಣವೀರ್ ಸಿಂಗ್ ಅವರು ಸೋಶಿಯಲ್ ಮಿಡಿಯಾದಲ್ಲಿ ಶುಭಾ ಶಯಗಳನ್ನು ತಿಳಿಸಿದ್ದಾರೆ. ಕಳೆದ ವರ್ಷದ ಬ್ಲ್ಯಾಕ್ ಆ್ಯಂಡ್ ವೈಟ್ ವೆಡ್ಡಿಂಗ್ ಫೋಟೊ ಜೊತೆಗೆ ಕ್ಯಾಪ್ಶನ್ ಕೂಡ ನಟ ಶಾರುಖ್ ಖಾನ್ ಹಂಚಿ ಕೊಂಡಿದ್ದಾರೆ. ದಂಪತಿಗಳಿಗೆ ವಾರ್ಷಿಕೋತ್ಸವದ ಶುಭಾಶಯಗಳು… ಹೀಗೆ ಸದಾ ಕಾಲ ಇಬ್ಬರೂ ಒಟ್ಟಿಗೆ ಇರಿ.. ಎಂದು ಹಾರೈಸುತ್ತೇನೆ. ನಿಮ್ಮ ಪ್ರೀತಿ, ಆರೋಗ್ಯ ಚಿರಕಾಲ ಹೀಗೆ ಇರಲಿ ಎಂದು ಬರೆದುಕೊಂಡಿದ್ದಾರೆ.
