ಉದಯವಾಹಿನಿ ,ಕುಂದಾಪುರ : ತಾಲೂಕಿನ ಪ್ರಮುಖ ಆಕರ್ಷಣೆ ಏನು ಅಂತ ಯಾರೇ ಕೇಳಿದರೂ ಅದಕ್ಕೆ ಉತ್ತರವಾಗಿ ಸಿಗುವುದು ಈಗ ಒಂದೇ ತಾಣ. ಅದು ಯುವ ಮೆರಿಡಿಯನ್ ಬೇ ಎಂಬ ಆತಿಥ್ಯ ತಾಣ. ಇದು ಆತಿಥ್ಯ ತಾಣ ಎಂದಷ್ಟೇ ಹೇಳಿದರೆ ಬಹಳ ಸೀಮಿತಗೊಳಿಸಿದಂತಾಗಿಬಿಡುತ್ತದೆ. ಇದೊಂದು ಅಕ್ಷರಶಃ ಮಾಯಾ ಲೋಕ. ಬೇರೆಯದೇ ಪ್ರಪಂಚ. ಕುಂದಾಪುರದಂಥ ಪುಟ್ಟ ಊರ ಬಳಿ ಎಕರೆಗಟ್ಟಲೆ ಜಾಗದಲ್ಲಿ ನಿರ್ಮಾಣಗೊಂಡಿರುವ ಯುವ ಮೆರಿಡಿಯನ್ ಬೇ ಒಂದು ಸ್ವರ್ಗ. ದೇಶದ ಯಾವ ರೆಸಾರ್ಟ್ ಗೂ ಸೆಡ್ಡು ಹೊಡೆಯುವಂಥ ಹೆಮ್ಮೆಯ ಆತಿಥ್ಯ ತಾಣ ಕರ್ನಾಟಕದ ಕುಂದಾಪುರದಲ್ಲಿದೆ ಎಂದು ನಾವು ಎದೆ ತಟ್ಟಿ ಹೇಳಬಹುದು. ಕರ್ನಾಟಕದಲ್ಲಿ ರಾಮೋಜಿರಾವ್ ಫಿಲ್ಮ್ ಸಿಟಿ ಥರದ ಒಂದು ತಾಣ ಇಲ್ಲ ಎಂಬ ಕೊರಗು ಬೇಡ. ಯುವ ಮೆರಿಡಿಯನ್ ಬೇ ಇದೆ.
ವಂಡರ್ ಲಾ ನೀಲಾದ್ರಿ ಥರದ ಅಮ್ಯೂಸ್ ಮೆಂಟ್ ಪಾರ್ಕ್, ವಾಟರ್ ಪಾರ್ಕ್ ಕರ್ನಾಟಕದಲ್ಲಿ ಇನ್ನೆಲ್ಲಿದೆ ಎಂದು ಪ್ರಶ್ನಿಸಿದರೂ ಅದೇ ಉತ್ತರ.. ಯುವ ಮೆರಿಡಿಯನ್ ಬೇ! ಕನ್ನಡ ಚಿತ್ರರಂಗದಲ್ಲಿ ದಾಖಲೆಗಳನ್ನೇ ಪುಡಿಗಟ್ಟಿದ ಚಿತ್ರ ಕಾಂತಾರದ ಪ್ರೀಕ್ವೆಲ್ ನ ಚಿತ್ರೀಕರಣಕ್ಕೆ ಹೊಂಬಾಳೆ ಫಿಲ್ಮ್ಸ್ ಅಯ್ಕೆ ಮಾಡಿಕೊಂಡದ್ದು ಯುವ ಮೆರಿಡಿಯನ್ ಎಂಬ ಭೂಸ್ವರ್ಗವನ್ನು. ಇದರ ಖ್ಯಾತಿ ಎಂಥದ್ದು ಎಂಬುದಕ್ಕೆ ಇದೊಂದು ಚಿಕ್ಕ ನಿದರ್ಶನವಷ್ಟೆ.
ಪ್ರಾಣಿ ಪ್ರಿಯರಿಗೆ ಪ್ರಾಣಿಗಳಿವೆ. ಪಕ್ಷಿ ಪ್ರಿಯರಿಗೆ ಅಪರೂಪದ ಪಕ್ಷಿಗಳಿವೆ. ಕೈಗೆಟುಕುವಂತೆ ಸಿಗುವ ಆಯಾ ವಾತಾವರಣದ ಸೀಸನ್ನಿನ ಹಣ್ಣುಗಳಿವೆ. ಫಿಟ್ನೆಸ್ಸಿಗೆ ಏನೂ ಇಲ್ವಾ ಅಂತ ಕೇಳಿದರೆ ಸುಸಜ್ಜಿತ ಅಂತಾರಾಷ್ಟ್ರೀಯ ಗುಣಮಟ್ಟದ ಜಿಮ್ ಇದೆ. ಮೈಕೈಗೆ ಉಲ್ಲಾಸ ಬೇಕೆಂದರೆ ಸ್ಪಾ ಇದೆ. ದೇಹದಣಿಸಿ ಮನಸ್ಸುಅರಳಿಸುವ ಈಜುಕೊಳವಿದೆ.
