ಉದಯವಾಹಿನಿ, ಭಾರತದಲ್ಲಿ ಬಹುತೇಕರಿಗೆ ಬೆಳಗ್ಗೆ ಎದ್ದ ಕೂಡಲೇ ಟೀ ಕುಡಿಯುವ ಅಭ್ಯಾಸ ಇರುತ್ತದೆ. ಇನ್ನು ಕೆಲವರು ಕೆಲಸದ ಮಧ್ಯೆ ಟೀ ಕುಡಿದ್ರೆ ಒತ್ತಡ ಕಡಿಮೆಯಾಗುತ್ತೆ ಎಂದು ಹೇಳುತ್ತಾರೆ. ಹೀಗೆ ನಾನಾ ಕಾರಣಗಳಿಂದ ಜನರು ಟೀ ಕುಡಿಯುತ್ತಾರೆ. ಟೀ ಭಾರತದ ಜನಪ್ರಿಯ ಪಾನೀಯಗಳಲ್ಲಿ ಒಂದಾಗಿದೆ.ಅತಿಯಾದ ಟೀ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ವೈದ್ಯರು ಹೇಳುತ್ತಾರೆ. ಹೆಚ್ಚೆಚ್ಚು ಟೀ ಸೇವನೆಯ ಅಪಾಯ ಅಂತ ಗೊತ್ತಿದ್ರೂ ಜನರು ಈ ಅಭ್ಯಾಸದಿಂದ ಹೊರಗೆ ಬರಲು ಪ್ರಯತ್ನಿಸಲ್ಲ. ಒಂದು ವೇಳೆ 30 ದಿನ ಟೀ ಕುಡಿಯೋದು ಬಿಟ್ರೆ ದೇಹದಲ್ಲಾಗುವ ಬದಲಾವಣೆಗಳೇನು ಗೊತ್ತಾ?. .ಸುಮಾರು ಒಂದು ತಿಂಗಳವರೆಗೆ ಟೀ ಕುಡಿಯೋದನ್ನು ತ್ಯಜಿಸಿದ್ರೆ ದೇಹದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡು ಬರುತ್ತವೆ. 30 ದಿನ ಟೀ ಕುಡಿಯದಿದ್ರೆ ದೇಹದಲ್ಲಿನ ಕೆಫಿನ್ ಅಂಶ ಕಡಿಮೆಯಾಗುತ್ತದೆ. ನಿರ್ಜಲೀಕರಣ, ಮೂತ್ರ ವಿಸರ್ಜನೆಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ.
2.ಟೀ ಕುಡಿದಾಗ ನೆಮ್ಮದಿ ಅನುಭವವಾಗುತ್ತೆ ಎಂದು ಹೇಳುವುದನ್ನು ನಾವು ಕೇಳಿರುತ್ತೇವೆ. ಆದ್ರೆ ನೀವು ಟೀ ಕುಡಿಯೋದನ್ನು ಬಿಟ್ಟಾಗ ಒಳ್ಳೆಯ ನಿದ್ದೆ ನಿಮ್ಮದಾಗುತ್ತದೆ. ಗಾಢ ನಿದ್ದೆಯಿಂದ ದೇಹ ಮತ್ತು ಮನಸ್ಸು ಹಗುರವಾದ ಅನುಭವವುಂಟಾಗುತ್ತದೆ. ಇದರಿಂದ ಮಾನಸಿನ ಒತ್ತಡ ಕಡಿಮೆಯಾಗಿ ನಿರಾಳವಾದ ಅನುಭವ ನಿಮ್ಮದಾಗಿ ಇಡೀ ದಿನ ಲವಲವಿಕೆಯಿಂದಿರಬಹುದು.
ಟೀ ಕುಡಿಯದಿದ್ರೆ ದಣಿವು, ತಲೆನೋವು, ಕೆಲಸದಲ್ಲಿನ ಶ್ರದ್ಧೆ ಇಲ್ಲದಂತಾಗುತ್ತದೆ ಎಂದು ಹೇಳುತ್ತಾರೆ. ಆದ್ರೆ ಇದು ಕೇವಲ ಕೆಲವು ದಿನಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಒಂದು ವೇಳೆ ನಿಮ್ಮ ದೇಹ ಟೀ ಇಲ್ಲದ ವಾತಾವರಣಕ್ಕೆ ಒಗ್ಗಿಕೊಂಡ್ರೆ ಇಂತಹ ಯಾವುದೇ ಸಮಸ್ಯೆಗಳು ಕಾಣಿಸಿಕೊಳ್ಳಲ್ಲ.
