ಉದಯವಾಹಿನಿ, ಅಬುಧಾಬಿ: ಏರ್ ಇಂಡಿಯಾ ವಿಮಾನ ಅಪಘಾತದ ಬಳಿಕ, ದುಬೈನ ಇತಿಹಾದ್ ಎರ್‌ಲೈನ್ಸ್ ಬೋಯಿಂಗ್ 787 (Boeing 787) ವಿಮಾನಗಳಲ್ಲಿನ ಇಂಧನ ಸ್ವಿಚ್ ಲಾಕ್‌ಗಳನ್ನು ಪರಿಶೀಲಿಸಲು ಮುಂದಾಗಿದೆ. ಬೋಯಿಂಗ್ 787 ಡ್ರೀಮ್‌ಲೈನರ್‌ಗಳ ಲಾಕಿಂಗ್ ಫ್ಲೀಟ್-ವೈಡ್ ತಪಾಸಣೆಗೆ ವಿಮಾನಯಾನ ಸಂಸ್ಥೆ ಆದೇಶಿಸಿದೆ. ಅಲ್ಲದೇ ಪೈಲಟ್‌ಗಳಿಗೆ ಇಂಧನದ ಸ್ವಿಚ್ ನಿರ್ವಹಿಸುವಾಗ ಜಾಗ್ರತೆವಹಿಸುವಂತೆ ಸೂಚಿಸಲಾಗಿದೆ.
ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನದ ಎರಡೂ ಎಂಜಿನ್ ಇಂಧನ ನಿಯಂತ್ರಣ ಸ್ವಿಚ್ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ‘RUN’ ನಿಂದ ‘CUTOFF’ ಸ್ಥಾನಕ್ಕೆ ಬಂದಿತ್ತು ಎಂದು AAIB ವರದಿ ಬಹಿರಂಗಪಡಿಸಿದೆ. ಇದು ವಿಮಾನದ ಎಂಜಿನ್ ಒತ್ತಡ ಕಳೆದುಕೊಳ್ಳಲು ಕಾರಣವಾಯಿತು. ಈ ಬಗ್ಗೆ ಪೈಲಟ್‌ಗಳ ಸಂಭಾಷಣೆ ಬ್ಲಾಕ್ ಬಾಕ್ಸ್‌ನಲ್ಲಿ ರೆಕಾರ್ಡ್ ಆಗಿದ್ದು, ನೀವು ಇಂಧನದ ಸ್ವಿಚ್ ಏಕೆ ಆಫ್ ಮಾಡಿದ್ದೀರಿ ಎಂದು ಸಹಪೈಲಟ್ ಕೇಳಿದ್ದು ದಾಖಲಾಗಿದೆ. ಅಲ್ಲದೇ ಇದಕ್ಕೆ ಉತ್ತರಿಸಿರುವ ಮತ್ತೊಬ್ಬ ಪೈಲಟ್ ನಾನು ಆಫ್ ಮಾಡಲಿಲ್ಲ ಎಂದಿದ್ದರು.
