ಉದಯವಾಹಿನಿ,ಹೊಸದಿಲ್ಲಿ: 8 ಕೋಟಿ ರೂ. ಕದ್ದು ಒಡೋಗುತ್ತಿದ್ದ ದಂಪತಿ ಉತ್ತರಾಖಂಡದ ಹೇಮಕುಂಡ್ ಸಾಹಿಬ್ ಬಳಿ ಉಚಿತವಾಗಿ ವಿತರಿಸುತ್ತಿದ್ದ ಹಣ್ಣಿನ ಜ್ಯೂಸ್ ಕುಡಿಯಲು ಹೋಗಿ ಈಗ ಪೊಲೀಸರ ಅತಿಥಿಯಾಗಿದ್ದಾರೆ. ಲೂಧಿಯಾನದ ನಗದು ನಿರ್ವಹಣಾ ಕಂಪನಿಯೊಂದರ ದರೋಡೆ ಪ್ರಕರಣದ ಮಾಸ್ಟರ್‌ಮೈಂಡ್‌ಗಳು ಎನ್ನಲಾದ ಮನದೀಪ್ ಕೌರ್ ಮತ್ತು ಆಕೆಯ ಪತಿ ಜಸ್ವಿಂದರ್ ಸಿಂಗ್ ಅವರು ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿಯನ್ನು ಹಿಮ್ಮೆಟ್ಟಿಸಿ ಜೂನ್ 10ರಂದು ಸಿಎಂಎಸ್ ಸರ್ವಿಸಸ್‌ನ ಕಚೇರಿಯಿಂದ 8 ಕೋಟಿ ರೂ. ನಗದು ದರೋಡೆ ಮಾಡಿದ್ದರು. ದರೋಡೆಯ ನಂತರ ಮನ್‌ದೀಪ್ ಕೌರ್ ಮತ್ತು ಜಸ್ವಿಂದರ್ ಸಿಂಗ್ ಅವರು ಸಿಖ್ ಗುರುದ್ವಾರ ಹೇಮಕುಂಡ್ ಸಾಹಿಬ್‌ಗೆ ತೀರ್ಥಯಾತ್ರೆಗೆ ತೆರಳಿದ್ದರು. ತಮ್ಮ ಕಾರ್ಯಾಚರಣೆಯ ಯಶಸ್ಸಿಗೆ ದೇವರಿಗೆ ಧನ್ಯವಾದ ಅರ್ಪಿಸುವುದು ಅವರ ಉದ್ದೇಶವಾಗಿತ್ತು. ಆದರೆ ಆ ದೇವರು ಬೇರೆಯದೇ ಬಯಸಿದ್ದ ಎಂದು ಕಾಣುತ್ತದೆ. ಹೀಗೆ ಹೋದವರು ಈಗ ಕಂಬಿ ಎಣಿಸುತ್ತಿದ್ದಾರೆ.
