ಉದಯವಾಹಿನಿ, ಬೆಂಗಳೂರು: ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಆಲ್‌ರೌಂಡ್ ಶೈಲಿಯಿಂದಾಗಿ ಹೆಚ್ಚು ಚರ್ಚೆಯಲ್ಲಿರುತ್ತಾರೆ. ಆದರೆ, ಮೈದಾನದ ಹೊರಗೆ, ಹಾರ್ದಿಕ್ ತನ್ನ ಪ್ರೇಮ ಕಥೆಯ ಮೂಲಕ ಬಹಳಷ್ಟು ಸುದ್ದಿಗಳನ್ನು ಮಾಡಿದ್ದಾರೆ. ಫೆಬ್ರವರಿ 14 2023ರ ಪ್ರೇಮಿಗಳ ದಿನದಂದು ಹಾರ್ದಿಕ್ ಪಾಂಡ್ಯ ಅವರು ನತಾಶಾ ಜೊತೆ ಮತ್ತೊಮ್ಮೆ ಸಂಪ್ರದಾಯಿಕವಾಗಿ ವಿವಾಹವಾಗಿದ್ದರು. ಅದೇ ಸಮಯದಲ್ಲಿ, ಅವರ ಮದುವೆಯ ಸಮಾರಂಭದಲ್ಲಿ, ಹಾರ್ದಿಕ್ ಪಾಂಡ್ಯ ಪೂರ್ಣ ಶ್ರೀಮಂತಿಕೆಯನ್ನು ತೋರಿಸಿದರು. ಇವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಹಾರ್ದಿಕ್ ಪಾಂಡ್ಯ ಮದುವೆಯಲ್ಲಿ ಕುಟುಂಬಸ್ಥರೆಲ್ಲಾ ಕಾಣಿಸಿಕೊಂಡಿದ್ದರು. ಅವರು ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಇದು ಅಭಿಮಾನಿಗಳಿಂದ ಹೆಚ್ಚು ವೈರಲ್ ಸಹ ಆಗಿತ್ತು. ಆದರೆ ಇದೀಗ ವೈರಲ್ ಆಗಿರುವ ವೀಡಿಯೊದಲ್ಲಿ, ಪಂಖುರಿ ಶರ್ಮಾ ಹಾರ್ದಿಕ್ ಅವರ ಶೂಗಳನ್ನು ಎತ್ತಿಟ್ಟುಕೊಂಡು ಪಾಂಡ್ಯಾ ಬಳಿ ದೊಡ್ಡ ಮೊತ್ತದ ಹಣವನ್ನು ಕೇಳಿದ್ದಾರೆ.
