ಉದಯವಾಹಿನಿ,ಬೆಂಗಳೂರು: ವಿದ್ಯುತ್ ದರ ಏರಿಕೆ ವಿರುದ್ಧ, ಹುಬ್ಬಳ್ಳಿ ಮೂಲದ ಕೆಸಿಸಿಐ ಕೈಗಾರಿಕಾ ಸಂಸ್ಥೆ ಜೂನ್ 22 ರಂದು ಕರೆನೀಡಿರುವ ರಾಜ್ಯ ಬಂದ್ ಯಶಸ್ವಿ ಆಗೋದು ಅನುಮಾನ ಇದೆ. ಯಾಕಂದ್ರೆ ಕೈಗಾರಿಕಾ ಸಂಘಟನೆಗಳಲ್ಲೇ ಒಗ್ಗಟ್ಟಿಲ್ಲ. ಏಕಾಏಕಿ ಕರೆದಿರುವ ಬಂದ್ ನಿರ್ಧಾರಕ್ಕೆ ಎಲ್ಲಾ ಸಂಘಟನೆಗಳ ಬೆಂಬಲವೂ ಸಿಕ್ಕಿಲ್ಲ. ರಾಜ್ಯದ 30 ಜಿಲ್ಲೆಗಳಲ್ಲಿಯೂ ಇರುವ 150 ಅಸೋಸಿಯೇಷನ್ ಗಳನ್ನು ಒಳಗೊಂಡಿರುವ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ಯಾವುದೇ ಬಂದ್ ಗೆ ಕರೆನೀಡಿಲ್ಲ. ಇದು ಗೊಂದಲ ಸೃಷ್ಟಿಯಾಗಿದೆ ಅಷ್ಟೆ ಎಂದು ಎಫ್ ಕೆಸಿಸಿಐ ಅಧ್ಯಕ್ಷರಾದ ಗೋಪಾಲರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ಬಂದ್ ಗೆ ಕರೆನೀಡಿರುವುದು ಹುಬ್ಬಳ್ಳಿ ಮೂಲದ ಕೆಸಿಸಿಐ ಮಾತ್ರ. ಆದರೆ ಮಹಾಸಂಸ್ಥೆಯಾದ FKCCI ಇದಕ್ಕೆ ಬೆಂಬಲ ನೀಡುತ್ತಿಲ್ಲ. ಕೆಸಿಸಿಐ ಬಂದ್ ಅವರು ಮಾಡ್ತಾರೆ ಆದರೆ ನಮಗೆ ಅದು ಸಂಬಂಧ ಇಲ್ಲ ಎಂದರು.ವಿದ್ಯುತ್ ದರ ಏರಿಕೆ: ಗುರುವಾರ ಕರ್ನಾಟಕ ಬಂದ್‌ಗೆ ವಾಣಿಜ್ಯೋದ್ಯಮ ಸಂಸ್ಥೆ ಕರೆ. ನಾವು ಸರ್ಕಾರದ ಜೊತೆ ನಿರಂತರ ಮಾತುಕತೆಯಲ್ಲಿದ್ದೇವೆ. ರಾಜ್ಯದ ಐದು ಸಂಸ್ಥೆಗಳ ಜೊತೆಗೂ ಇಂಧನ ಸಚಿವರಾದ ಕೆ.ಜಾರ್ಜ್ ಮಾತುಕತೆ ನಡೆಸಿದ್ದಾರೆ.
