ಉದಯವಾಹಿನಿ,ನವದೆಹಲಿ: ಮೂರು ದಿನಗಳ ಅಂತಾರಾಷ್ಟ್ರೀಯ ಆಟಿಕೆ ಮೇಳ ಜುಲೈ 8 ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆರಂಭವಾಗಲಿದ್ದು, ಕನಿಷ್ಠ 25 ದೇಶಗಳಿಂದ ಸುಮಾರು 5,000 ಖರೀದಿದಾರರು ಮತ್ತು ಉದ್ಯಮಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಟಾಯ್ ಅಸೋಸಿಯೇಷನ್ ಆಫ್ ಇಂಡಿಯಾ ಸೋಮವಾರ ತಿಳಿಸಿದೆ. ವಾಲ್‌ಮಾರ್ಟ್ ಮತ್ತು ಲೆಗೊ ಸೇರಿದಂತೆ ಸುಮಾರು 20 ಜಾಗತಿಕ ಕಂಪನಿಗಳ ಸಿಇಒಗಳು ಸಹ ಈ ಮೇಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಟಾಯ್ ಅಸೋಸಿಯೇಷನ್ ಹೇಳಿದೆ. ಪ್ರಗತಿ ಮೈದಾನದಲ್ಲಿ ಆಯೋಜಿಸಲಾಗಿರುವ ಈ ಮೇಳದಲ್ಲಿ 250ಕ್ಕೂ ಹೆಚ್ಚು ಭಾರತೀಯ ಬ್ರಾಂಡ್‌ಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲಿವೆ.
ಟಾಯ್ ಅಸೋಸಿಯೇಷನ್ ಆಫ್ ಇಂಡಿಯಾದ ಅಧ್ಯಕ್ಷ ಮನು ಗುಪ್ತಾ ಮಾತನಾಡಿ, 14ನೇ ಟಾಯ್ ಬಿಜ್ ಇಂಟರ್‌ನ್ಯಾಶನಲ್ ಬಿ2ಬಿ ಎಕ್ಸ್‌ಪೋ 2023, ದಕ್ಷಿಣ ಏಷ್ಯಾದಲ್ಲೇ ಅತಿ ದೊಡ್ಡ ಮೇಳವಾಗಿದೆ ಎಂದಿದ್ದಾರೆ. “ಭಾರತೀಯ ಆಟಿಕೆ ತಯಾರಕರು ತಮ್ಮ ಉತ್ಪನ್ನಗಳು ಮತ್ತು ಸಾಮರ್ಥ್ಯವನ್ನು ಜಾಗತಿಕ ಪ್ರೇಕ್ಷಕರಿಗೆ ಪ್ರದರ್ಶಿಸಲು ಇದು ಉತ್ತಮ ಅವಕಾಶವಾಗಿದೆ. ಈ ಮೇಳೆ ಹೊಸ ಗ್ರಾಹಕರನ್ನು ಮತ್ತು ಪಾಲುದಾರರನ್ನು ಆಕರ್ಷಿಸಲು, ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸಲು ಮತ್ತು ಅವರ ಬ್ರ್ಯಾಂಡ್ ಮಾನ್ಯತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ” ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!