ಉದಯವಾಹಿನಿ,ಪಣಜಿ:  ಗೋವಾದ ಮಾಲ್ ಪೊರ್ವೊರಿಮ್ ಹೆದ್ದಾರಿಯಲ್ಲಿ ಎಲ್ಲಾ ಬಾಗಿಲುಗಳನ್ನು ತೆರೆದು ಕಾರ್ ಡ್ರೈವಿಂಗ್ ಮಾಡುವ ಮೂಲಕ ಕಾರ್ ಡ್ರೈವರ್ ಸ್ಟಂಟ್ ಮಾಡುತ್ತಿರುವ ವೀಡಿಯೊ ವೈರಲ್ ಆಗಿತ್ತು. ಇದೀಗ ಪೊಲೀಸರು ಆತನ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ಕಾರ್ ಡ್ರೈವರ್ ನನ್ನು ಪೊಲೀಸರು ಬಂಧಿಸಿ ದಂಡ ವಿಧಿಸಿದ್ದಾರೆ. ಚಾಲಕನನ್ನು ಫಾಹಿದ್ ಹಮ್ಜಾ (37)ಎಂದು ಗುರುತಿಸಲಾಗಿದೆ. ಈತ ಮೂಲತಃ ಕರ್ನಾಟಕದ ಧಾರವಾಡದ ಶಿವಾನಂದನಗರ ಮೂಲದವನು ಎನ್ನಲಾಗಿದೆ. ಈತನೊಂದಿಗೆ ಇದ್ದ ಸ್ನೇಹಿತನನ್ನೂ ಪೋಲಿಸರು ಬಂಧಿಸಿದ್ದಾರೆ, ಈತನ ವಿರುದ್ಧ ಸ್ಥಳೀಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈತನ ವಿರುದ್ಧ ಐಪಿಸಿ ಮತ್ತು ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಚಾಲಕನ ಈ ವಿಡಿಯೋ ವೈರಲ್ ಆಗಿತ್ತು. ಭಾನುವಾರ ರಾತ್ರಿ ಘಟನೆ ನಡೆದಿದೆ. ವಾಹನವು ಜಿಎ- 03, ಸಿ- 9203 ನೊಂದಣಿಯದ್ದಾಗಿದೆ. ಚಾಲಕ ಈ ರೀತಿ ವಾಹನ ಚಲಾಯಿಸಿ ಇತರರ ಪ್ರಾಣಕ್ಕೆ ಕುತ್ತು ತರುವುದರ ವಿರುದ್ಧ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ. ಘಟನೆಯ ಬಗ್ಗೆ ಇತರ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ರಮ ಕೈಗೊಳ್ಳುವಂತೆಯೂ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!