ಉದಯವಾಹಿನಿ, ಬೆಂಗಳೂರು: ಅಕ್ಷಯ್ ಕುಮಾರ್ ಜೊತೆ ಕೆಲಸ ಮಾಡಲು ಕೆಲವು ನಿರ್ಮಾಪಕರು ಹಿಂದೇಟು ಹಾಕುತ್ತಿದ್ದಾರೆ. ಅಂಥ ನಿರ್ಮಾಪಕರ ಸಾಲಿನಲ್ಲಿ ವಿಪುಲ್ ಅಮೃತ್ಲಾಲ್ ಶಾ ಕೂಡ ಇದ್ದಾರೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಗೆ ತುಂಬ ಬೇಡಿಕೆ ಇದೆ. ಆದರೂ ಕೂಡ ಇತ್ತೀಚಿನ ವರ್ಷಗಳಲ್ಲಿ ಅವರಿಗೆ ಸತತ ಸೋಲು ಉಂಟಾಗುತ್ತಿದೆ. ಸ್ಕ್ರಿಪ್ಟ್ ಆಯ್ಕೆಯಲ್ಲಿ ಅವರು ಎಡವುತ್ತಿದ್ದಾರೆ ಎಂಬುದು ನಿಜ. ಅವರು ಮಾಡಿದ ಎಲ್ಲ ಸಿನಿಮಾಗಳೂ ಹೀನಾಯವಾಗಿ ಸೋಲುತ್ತಿವೆ. ‘ಸೆಲ್ಫೀ’, ‘ರಕ್ಷಾ ಬಂಧನ್’, ‘ಸಾಮ್ರಾಜ್ ಪೃಥ್ವಿರಾಜ್’ ಸೇರಿದಂತೆ ಹಲವು ಸಿನಿಮಾಗಳು ನಿರೀಕ್ಷಿತ ಮಟ್ಟದ ಕಲೆಕ್ಷನ್ ಮಾಡಲಾಗದೇ ನೆಲ ಕಚ್ಚಿದವು. ಈಗ ಅವರ ಜೊತೆ ಕೆಲಸ ಮಾಡಲು ಕೆಲವು ನಿರ್ಮಾಪಕರು ಹಿಂದೇಟು ಹಾಕುತ್ತಿದ್ದಾರೆ. ಅಂಥ ನಿರ್ಮಾಪಕರ ಸಾಲಿನಲ್ಲಿ ವಿಪುಲ್ ಅಮೃತ್ಲಾಲ್ ಶಾ ಕೂಡ ಇದ್ದಾರೆ.
‘ದಿ ಕೇರಳ ಸ್ಟೋರಿ’ ನಿರ್ಮಾಣ ಮಾಡಿ ದೊಡ್ಡ ಗೆಲುವು ಕಂಡಿರುವ ವಿಪುಲ್ ಶಾ ಅವರು ಅಕ್ಷಯ್ ಕುಮಾರ್ ಜೊತೆ ಸಿನಿಮಾ ಮಾಡುವುದನ್ನು ಬಹಳ ಹಿಂದೆಯೇ ನಿಲ್ಲಿಸಿದ್ದಾರೆ. ನಿರ್ದೇಶಕನಾಗಿಯೂ ವಿಪುಲ್ ಶಾ ಗುರುತಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಅಕ್ಷಯ್ ಕುಮಾರ್ ಮತ್ತು ವಿಪುಲ್ ಶಾ ಅವರ ಒಟ್ಟಾಗಿ ಹಲವು ಸಿನಿಮಾಗಳನ್ನು ಮಾಡಿದ್ದರು. ಆದರೆ ನಂತರದ ದಿನಗಳಲ್ಲಿ ಅಕ್ಷಯ್ ಕುಮಾರ್ ಅವರಿಂದ ವಿಪುಲ್ ಶಾ ಅಂತರ ಕಾಯ್ದುಕೊಂಡರು. ಇಂಥ ಸಂದರ್ಭಗಳಲ್ಲಿ ಗಾಸಿಪ್ ಹಬ್ಬುವುದು ಸಹಜ. ಇವರಿಬ್ಬರ ನಡುವೆ ಏನೋ ವೈಮನಸ್ಸು ಉಂಟಾಗಿದೆ ಎಂದು ಎಲ್ಲರೂ ಮಾತನಾಡಿಕೊಂಡರು. ತಾವಿಬ್ಬರೂ ದೂರ ಆಗಿದ್ದಕ್ಕೆ ಕಾರಣ ಏನು ಎಂಬುದನ್ನು ವಿಪುಲ್ ಶಾ ಅವರು ಈಗ ವಿವರಿಸಿದ್ದಾರೆ. ಆ ಮೂಲಕ ಅವರು ಸತ್ಯ ಏನೆಂಬುದನ್ನು ತಿಳಿಸಿದ್ದಾರೆ.
