ಉದಯವಾಹಿನಿ, ಚೀನಾ: ವಿಚಿತ್ರ ಘಟನೆಗಳು ವೈರಲ್​​ ಆಗುತ್ತ ಇರುತ್ತದೆ. ಇದೀಗ ಅಚ್ಚರಿ ಹುಟ್ಟಿಸುವಂತಹ ವಿಚಾರವೊಂದು ವೈರಲ್​​ ಆಗಿದೆ. ಚೀನಾದ ಹುಬೈ ಪ್ರಾಂತ್ಯದ ವಿಶ್ವವಿದ್ಯಾಲಯದ ವಸತಿ ನಿಲಯದಲ್ಲಿ 20 ವರ್ಷದ ಯುವತಿಯೊಬ್ಬಳು ಪರೀಕ್ಷೆ ತಯಾರಿ ನಡೆಸುತ್ತಿದ್ದ ವೇಳೆ 4.5 ಕೆಜಿ ತೂಕದ ದೈತ್ಯ ಮಗುವಿಗೆ ಜನ್ಮ ನೀಡಿದ್ದಾಳೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ ವಿದ್ಯಾರ್ಥಿನಿಗೆ ಅನಿರೀಕ್ಷಿತ ಹೆರಿಗೆ ನೋವು ಕಾಣಿಸಿಕೊಂಡಿದೆ. ವೈದ್ಯರ ಬಳಿ ಹೋಗುವ ಮೊದಲೇ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಹೇಳಲಾಗಿದೆ. ಈ ಬಗ್ಗೆ ಆಕೆಯ ಸ್ನೇಹಿತೆ ವಿವರವಾಗಿ ವಿವರಿಸಿದ್ದಾಳೆ. ಮಧ್ಯರಾತ್ರಿಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಈ ವೇಳೆ ಆಕೆಯ ರೂಮ್‌ಮೇಟ್​​ಗೆ ರಕ್ತ ವಾಸನೆ ಬಂದಿದೆ. ತಕ್ಷಣ ಎಚ್ಚರವಾಗಿದೆ. ಎದ್ದು ನೋಡುವಾಗ ಆಕೆ ನೋವಿನಿಂದ ಬಳಲುತ್ತಿದ್ದಳು, ಕೆಳಗಿರುವ ಹೊದಿಕೆ ಸಂಪೂರ್ಣ ರಕ್ತದಿಂದ ತುಂಬಿ ಹೋಗಿತ್ತು. ತಕ್ಷಣ ಸಹಾಯಕ್ಕೆ ಅಕ್ಕಪಕ್ಕ ರೂಮ್​​​ನ ಸ್ನೇಹಿತರನ್ನು ಹಾಗೂ ವೈದ್ಯರ ಸಹಾಯವನ್ನು ಕೇಳುವಷ್ಟರಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ.

ಇಲ್ಲಿ ಅಚ್ಚರಿಯ ವಿಚಾರವೊಂದು ಆಕೆಯ ಸ್ನೇಹಿತೆ ವೈದ್ಯರ ಬಳಿ ಹೇಳಿದ್ದಾಳೆ. ಏನೆಂದರೆ, ಆಕೆಗೆ ಇದು ಮೊದಲ ಹೇರಿಗೆ ಅಲ್ಲ, ಅವಳಿಗೆ ಈಗಾಗಲೇ ಒಂದು ಮಗು ಇದೆ, ಆದ್ದರಿಂದ ಅವಳು ತುಂಬಾ ಶಾಂತವಾಗಿ ಇದನ್ನು ನಿಭಾಯಿಸಿದ್ದಾಳೆ ಎಂದು ಶಾಕಿಂಗ್​​ ವಿಚಾರವನ್ನು ಬಿಚ್ಚಿಟ್ಟಿದ್ದಾಳೆ. ಗರ್ಭಿಣಿ ಮಹಿಳೆಯನ್ನು ಸರಿಯಾದ ಆರೈಕೆಯಿಲ್ಲದೆ ವಸತಿ ನಿಲಯದಲ್ಲಿ ಬಿಟ್ಟಿದ್ದಕ್ಕಾಗಿ ವಿದ್ಯಾರ್ಥಿನಿಯ ಕುಟುಂಬವನ್ನು ವೈದ್ಯರು ತರಾಟೆಗೆ ತೆಗೆದುಕೊಂಡಿದ್ದಾರೆ. SCMP ವರದಿ ಪ್ರಕಾರ, ವಿದ್ಯಾರ್ಥಿನಿಯನ್ನು ಪರೀಕ್ಷೆ ಮಾಡಿದ ವೈದ್ಯರು ಆಕೆಯ ಮಗುವಿನ ಗಾತ್ರವನ್ನು ನೋಡಿ ಕೂಡ ಅಚ್ಚರಿಗೊಂಡಿದ್ದಾರೆ. ಗರ್ಭಾವಸ್ಥೆಯಲ್ಲಿ ವ್ಯಾಯಾಮದ ಕೊರತೆ ಮತ್ತು ಹೆಚ್ಚಿನ ಒತ್ತಡದಿಂದ ತಾಯಿ ತೀವ್ರ ನೋವು ಅನುಭವಿಸಿದ್ದಾಳೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *

error: Content is protected !!