ಉದಯವಾಹಿನಿ, ಚಿಕ್ಕಮಗಳೂರು : ಮಳೆಗಾಲ ಬಂತಂದ್ರೆ ಚಿಕ್ಕಮಗಳೂರಿಗೆ ‘ರಯ್ಯಾ’ ಅನ್ನೋ ತಿರುಗಾಟಪ್ರಿಯರೇ ಯಾವ್ದಕ್ಕೂ ಒಮ್ಮೆ ನಿಮ್ಮ ಕಾಲನ್ನ ಬ್ರೇಕ್ ಮೇಲೆ ಇಟ್ಬಿಡಿ! ಯಾಕಂತೀರಾ…? ಇದು ನಿಮ್ಮ ಚಾರಣಕ್ಕೆ ತಡೆಯಾಗುವ ವಿಷಯ. !ಹೌದು,ಕಾಫಿನಾಡಿನ ಪ್ರಮುಖ ಆಕರ್ಷಣೆ ಕೇಂದ್ರವಾದ ಮುಳ್ಳಯ್ಯನಗಿರಿ ಸೇರಿದಂತೆ ಚಂದ್ರದ್ರೋಣ ಪರ್ವತಗಳ ಸಾಲಿಗೆ ಹೋಗುವ ಪ್ರವಾಸಿಗರಿಗೆ )ಜಿಲ್ಲಾಡಳಿತ ಶಾಕ್ ನೀಡಿದೆ ಪ್ರವಾಸಿಗರ ದಟ್ಟಣೆಯನ್ನು ತಡೆಯಲು ಈ ಹೊಸ ನಿಯಮವನ್ನ ಜಾರಿಗೆ ತರಲಾಗಿದೆ, ಹಾಗಾದ್ರೆ ಆ ಹೊಸ ನಿಯಮ ಏನು ಎಲ್ಲವನ್ನು ಹೇಳ್ತಿವಿ ಈ ಸ್ಟೋರಿ ನೋಡಿ.. ಬರೀ ಮುಳ್ಳಯ್ಯನ ಗಿರಿ ಅಲ್ಲ, ಬೇರೆಲ್ಲಾ ಕಡೆಯೂ ಪ್ರವಾಸಕ್ಕೆ ಹೊಸ ನಿಯಮ ಪ್ರವಾಸಿಗರ ಹಾಟ್ ಸ್ಪಾಟ್ ಮನ್ಸೂನ್ ಸೇರಿದಂತೆ ಎಲ್ಲಾ ಟೈಮ್ ಅಲ್ಲೂ ಭೇಟಿ ನೀಡಬಹುದಾದ ರಾಜ್ಯದ ಅತಿ ಎತ್ತರದ ಶಿಖರ ಮುಳ್ಳಯ್ಯನಗಿರಿ ಸೇರಿದಂತೆ ಸುತ್ತ ಮುತ್ತಲಿನ ಗಿರಿ ಪ್ರದೇಶಗಳಿಗೆ ತೆರಳುವ ಪ್ರವಾಸಿಗರಿಗೆ ಜಿಲ್ಲಾಡಳಿತ ಹೊಸ ನಿಯಮವನ್ನ ಜಾರಿಗೆ ತಂದಿದೆ.
ಗಿರಿ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ಕಾರಣಕ್ಕೆ ಹಾಗೂ ಚಂದ್ರ ದ್ರೋಣ ಪರ್ವತಗಳ ಸಾಲಿನಲ್ಲಿ ಅತಿಯಾದ ಜನ ಓಡಾಟ ತಪ್ಪಿಸಿ ಪರ್ವತದ ಸಾಲುಗಳನ್ನು ಉಳಿಸುವ ನಿಟ್ಟಿನಿಂದ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದ್ದು , ವಾರಾಂತ್ಯದಲ್ಲಿ ಬರುವ ಸಾವಿರಾರು ಪ್ರವಾಸಿಗರನ್ನು ನಿಯಂತ್ರಿಸುವ ಉದ್ದೇಶ ಹಾಗೂ ವಾಹನ ದಟ್ಟಣೆ ನಿಯಂತ್ರಣಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಪ್ರತಿದಿನ ಬೆಳಿಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ಮತ್ತು ಮಧ್ಯಾಹ್ನ 1ರಿಂದ ಸಂಜೆ 6ರವರೆಗೆ ಎರಡು ಸ್ಲಾಟ್‌ಗಳಲ್ಲಿ ತಲಾ 600 ವಾಹನಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ.
