ಉದಯವಾಹಿನಿ, ಸಿಹಿತಿಂಡಿ ಅಂದ್ರೆ ಇಷ್ಟಪಡದವರು ಯಾರಿದ್ದಾರೆ ಹೇಳಿ? ಗುಲಾಬ್ ಜಾಮೂನ್, ಜಿಲೇಬಿ, ಕಲ್ಕಂಡ, ಬರ್ಫಿ, ಲಡ್ಡು ಇಂಥ ಸಿಹಿ ತಿಂದ್ರೆ ಸಿಗೋ ಆನಂದವೇ ಬೇರೆ. ಆದ್ರೆ, ಇವುಗಳನ್ನು ತಿಂದ ತಕ್ಷಣ ಬಾಯಿ ಸಕ್ಕರೆಯಿಂದ ತುಂಬಿರುತ್ತದೆ. ಆಗ ನೀರು ಕುಡಿಯಬೇಕೆಂಬ ಆಸೆ ಹೆಚ್ಚಾಗುತ್ತದೆ. ಹಲವರು ತಕ್ಷಣ ನೀರು ಕುಡಿಯುತ್ತಾರೆ. ಆದ್ರೆ, ಸಿಹಿ ತಿಂದ ತಕ್ಷಣ ನೀರು ಕುಡಿಯೋದು ಒಳ್ಳೆಯದೇ? ಏನಾಗುತ್ತೆ ನೋಡೋಣ… ಸಿಹಿತಿಂಡಿಗಳಲ್ಲಿ ಸಕ್ಕರೆ ಅಂಶ ಹೆಚ್ಚಿರುತ್ತದೆ. ನೀವು ಸಿಹಿ ತಿಂದ ತಕ್ಷಣ ನೀರು ಕುಡಿದರೆ, ಆ ಸಕ್ಕರೆ ಬೇಗನೆ ದ್ರವ ರೂಪದಲ್ಲಿ ದೇಹ ಸೇರುತ್ತದೆ. ಇದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಏರುತ್ತದೆ. ಮಧುಮೇಹ ಇರುವವರಿಗೆ ಇದು ಅಪಾಯಕಾರಿ. ಇಂಥ ಅಭ್ಯಾಸ ಮುಂದುವರಿದರೆ ಟೈಪ್-2 ಮಧುಮೇಹ ಬರಬಹುದು. ತಿಂದ ತಕ್ಷಣ ನೀರು ಕುಡಿದರೆ ಜೀರ್ಣಕ್ರಿಯೆ ನಿಧಾನವಾಗುತ್ತದೆ. ನೀರಿನಿಂದ ಜೀರ್ಣಕ್ರಿಯೆಗೆ ಬೇಕಾದ ಆಮ್ಲಗಳು ದುರ್ಬಲವಾಗುತ್ತವೆ. ಇದು ಅಜೀರ್ಣ, ಗ್ಯಾಸ್, ಎದೆಯುರಿ ಮುಂತಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸಿಹಿ ತಿಂದ ಮೇಲೆ ಜೀರ್ಣವಾಗಲು ಸ್ವಲ್ಪ ಸಮಯ ಬೇಕು. ತಕ್ಷಣ ನೀರು ಕುಡಿದರೆ ಆ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ. ಹತ್ತು ನಿಮಿಷ ಬಿಟ್ಟು ನೀರು ಕುಡಿಯುವುದು ಒಳ್ಳೆಯದು.
ರಕ್ತದಲ್ಲಿ ಸಕ್ಕರೆ ಮಟ್ಟ ಏರಿದಾಗ, ಮೇದೋಜೀರಕ ಗ್ರಂಥಿ ಹೆಚ್ಚು ಇನ್ಸುಲಿನ್ ಬಿಡುಗಡೆ ಮಾಡುತ್ತದೆ. ಇದು ಆಗಾಗ್ಗೆ ಆದರೆ ದೇಹ ಇನ್ಸುಲಿನ್‌ಗೆ ಸ್ಪಂದಿಸುವುದಿಲ್ಲ. ಇದರಿಂದ ಟೈಪ್-2 ಮಧುಮೇಹ ಬರುವ ಸಾಧ್ಯತೆ ಹೆಚ್ಚು.
ಮೆಟಬಾಲಿಸಂ ಅಂದರೆ ದೇಹ ಆಹಾರವನ್ನು ಶಕ್ತಿಯಾಗಿ ಪರಿವರ್ತಿಸುವ ಪ್ರಕ್ರಿಯೆ. ಸಿಹಿ ತಿಂದ ತಕ್ಷಣ ನೀರು ಕುಡಿದರೆ ಈ ಪ್ರಕ್ರಿಯೆ ನಿಧಾನವಾಗುತ್ತದೆ. ಇದು ದೇಹದ ಶಕ್ತಿಯ ಮಟ್ಟ ಕಡಿಮೆ ಮಾಡಿ ಆಯಾಸ ಹೆಚ್ಚಿಸುತ್ತದೆ. ಉತ್ಸಾಹ ಕಡಿಮೆ ಮಾಡುತ್ತದೆ.

Leave a Reply

Your email address will not be published. Required fields are marked *

error: Content is protected !!