ಉದಯವಾಹಿನಿ, ಸ್ಟಾರ್ ಕ್ರಿಕೆಟಿಗ ಜಸ್ಟ್ರೀತ್ ಬುಮ್ರಾ ಬಿಸಿಸಿಐ ಸೆಂಟರ್ ಆಫ್ ಎಕ್ಸೆಲೆನ್ಸ್‌ಗೆ ಭೇಟಿ ನೀಡಿದ್ದಾರೆ. ಐಪಿಎಲ್ ಆರಂಭವಾಗೋಕೆ ಇನ್ನೇನು ವಾರಕ್ಕಿಂತ ಕಡಿಮೆ ಸಮಯ ಇದೆ. ಗಾಯದ ಸಮಸ್ಯೆಯಿಂದಲೋ ಅಥವಾ ರೆಗ್ಯುಲರ್ ಚೆಕಪ್‌ಗಾಗಿಯೋ ಬುಮ್ರಾ ಸೆಂಟರ್ ಆಫ್ ಎಕ್ಸೆಲೆನ್ಸ್‌ಗೆ ಭೇಟಿ ನೀಡಿದ್ದಾರೆ. ಇದೀಗ ಬೆಂಗಳೂರಿನಲ್ಲಿಯೇ ಬುಮ್ರಾ ನೆಲೆಸಿದ್ದಾರೆ.
ಕಳೆದ ವಾರ, ಭಾರತದ ಟಿ20 ವಿಶ್ವಕಪ್ ವಿಜೇತ ಶಿಬಿರದಲ್ಲಿದ್ದ ನಾಲ್ವರು ಮುಂಬೈ ಆಟಗಾರರಿಗೆ ವಿಸ್ತ್ರತ ವಿರಾಮ ನೀಡಲಾಗಿದೆ ಎಂದು ಎಂಐ ಮುಖ್ಯ ಕೋಚ್ ಮಹೇಲ ಜಯವರ್ಧನೆ ಬಹಿರಂಗಪಡಿಸಿದರು. ಮಾರ್ಚ್ 8 ರಂದು ನಡೆದ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಭಾರತ ಟಿ20 ವಿಶ್ವಕಪ್ ಗೆದ್ದಿತ್ತು. ಮುಂಬೈ ಇಂಡಿಯನ್ಸ್ ತಂಡವು ಮಾರ್ಚ್ 29 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ತಮ್ಮ ಐಪಿಎಲ್ 2026 ಅಭಿಯಾನವನ್ನು ಪ್ರಾರಂಭಿಸಲಿದೆ.

Leave a Reply

Your email address will not be published. Required fields are marked *

error: Content is protected !!