ಉದಯವಾಹಿನಿ, ಕ್ಯಾರಮ್ ಸೀಡ್ಸ್ ಅಥವಾ ಬಿಷಪ್ಸ್ ವೀಡ್ ಎಂದೂ ಕರೆಯಲಾಗುವ ಓಮ (ಅಜವೈನ್) ಕಾಳುಗಳು ವೈಜ್ಞಾನಿಕವಾಗಿ ಟ್ರಾಕಿಸ್ಪರ್ಮಮ್ ಎಂದು ಕರೆಯಲಾಗುವ ಸಸ್ಯದ ಬೀಜಗಳಾಗಿದ್ದು, ಭಾರತೀಯ ಮತ್ತು ಮಧ್ಯಪ್ರಾಚ್ಯದ ಅಡಿಗೆ ಮನೆಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತದೆ. ತೀಕ್ಷ್ಯ ಹಾಗೂ ವಿಶಿಷ್ಟ ಪರಿಮಳ, ಸ್ವಲ್ಪ ಕಹಿ ಮತ್ತು ಕಟು ರುಚಿಯನ್ನು ಹೊಂದಿರುವ ಓಮ ಕಾಳುಗಳು ಸಮೃದ್ಧ ಸಾರಭೂತ ತೈಲಗಳು, ಖನಿಜಗಳು ಮತ್ತು ವಿಟಾಮಿನ್ಗಳನ್ನು ಒಳಗೊಂಡಿರುವುದರಿಂದ ಆಯುರ್ವೇದ ಔಷಧಿಗಳ ತಯಾರಿಕೆಯಲ್ಲಿಯೂ ವ್ಯಾಪಕವಾಗಿ ಬಳಕೆಯಾಗುತ್ತವೆ.

ನೀರಿನಲ್ಲಿ ನೆನೆಸಿಟ್ಟ ಓಮ ಕಾಳುಗಳ ಸೇವನೆಯು ಜೀರ್ಣಕಾರಿ ಕಿಣ್ವಗಳ ಬಿಡುಗಡೆಯನ್ನು ಉತ್ತೇಜಿಸುವ ಮೂಲಕ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ನೆರವಾಗುತ್ತದೆ. ಅದು ಅಜೀರ್ಣ, ಹೊಟ್ಟೆಯುಬ್ಬರ ಮತ್ತು ಮಲಬದ್ಧತೆಯ ಲಕ್ಷಣಗಳನ್ನೂ ಕಡಿಮೆ ಮಾಡುತ್ತದೆ. ಆ್ಯಸಿಡಿಟಿ ಅಥವಾ ಆಮ್ಮಿಯತೆ ಮತ್ತು ಎದೆಉರಿಯಿಂದ ಪಾರಾಗಲು ಸಾಂಪ್ರದಾಯಿಕವಾಗಿ ಓಮ ಕಾಳುಗಳನ್ನು ಬಳಸಲಾಗುತ್ತಿದೆ. ಓಮ ಕಾಳುಗಳ ನೀರಿನ ಸೇವನೆಯು ಹೊಟ್ಟೆಯಲ್ಲಿ ಆಮ್ಮಿಯ ಮಟ್ಟಗಳನ್ನು ತಗ್ಗಿಸಲು ನೆರವಾಗುತ್ತದೆ. ಅಸ್ತಮಾ, ಬ್ರಾಂಕೈಟಿಸ್ ಮತ್ತು ಕೆಮ್ಮಿನಂತಹ ಉಸಿರಾಟದ ತೊಂದರೆಗಳಿಂದ ಬಳಲುತ್ತಿರುವ ಜನರಿಗೆ ಓಮ ಕಾಳುಗಳ ನೀರಿನ ಸೇವನೆ ಉಪಯುಕ್ತವಾಗಿದೆ. ಶ್ವಾಸನಾಳವನ್ನು ಸ್ವಚ್ಛಗೊಳಿಸಲು, ಉರಿಯೂತವನ್ನು ಕಡಿಮೆ ಮಾಡಲು ಮತ್ತು ಉಸಿರಾಟವನ್ನು ಸುಗಮಗೊಳಿಸಲು ನೆರವಾಗಬಲ್ಲದು.

Leave a Reply

Your email address will not be published. Required fields are marked *

error: Content is protected !!