ಉದಯವಾಹಿನಿ, ಬೆಂಗಳೂರು : ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ವತಿಯಿಂದ ದಾವಣಗೆರೆಯ ರೇಣುಕಾ ಮಂದಿರದಲ್ಲಿ ಮೂರು ದಿನಗಳ ಕಾಲ ನಡೆದ ವೀರಶೈವ ಲಿಂಗಾಯತ ಶಿವಾಚಾರ್ಯರ ಶೃಂಗಸಭೆ ಅಂತ್ಯವಾಗಿದ್ದು, 40 ವರ್ಷಗಳ ನಡೆದ ಶಿವಾಚಾರ್ಯರ ಶೃಂಗ ಸಭೆಯ ಇಂದಿನ ಸಮಾರೋಪ ಸಮಾರಂಭದಲ್ಲಿ 12 ನಿರ್ಣಯಗಳನ್ನು ಅಂಗೀಕರಿಸಲಾಗಿದೆ. 12 ನಿರ್ಣಯಗಳ ಪೈಕಿ ಪ್ರಮುಖವಾಗಿ ಜಾತಿಗಣತಿ ವೇಳೆ ವೀರಶೈವ ಲಿಂಗಾಯತ ಎಂದು ಬರೆಸಬೇಕು. ಉಪಜಾತಿ ಯಾವುದೇ ಇದ್ದರೂ ವೀರಶೈವರು ಒಗ್ಗಟ್ಟು ಇರಬೇಕು ಎಂದು ಕರೆ ನೀಡಲಾಗಿದೆ.ಶಿವಾಚಾರ್ಯರ ಶೃಂಗ ಸಭೆಯ ಪ್ರಮುಖ ನಿರ್ಣಯಗಳು
ಜಾತಿಗಣತಿ ವೇಳೆ ವೀರಶೈವ ಲಿಂಗಾಯತ ಎಂದು ಬರೆಸಬೇಕು
ಉಪಜಾತಿ ಯಾವುದೇ ಇದ್ದರೂ ವೀರಶೈವರು ಒಗ್ಗಟ್ಟು ಇರಬೇಕು
ಒಳ ಪಂಗಡಗಳನ್ನು ಕೇಂದ್ರ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಬೇಕು
ಜಾತಿಗಣತಿ ವಿಚಾರವಾಗಿ ನಿಯೋಗದ ಮೂಲಕ ಪ್ರಧಾನಿ ಭೇಟಿ.

ಸಮ್ಮೇಳನದಲ್ಲಿ ರಂಭಾಪುರಿಶ್ರೀ ಹೇಳಿದ್ದೇನು…?
ಸಮ್ಮೇಳನದಲ್ಲಿ ರಂಭಾಪುರಿಶ್ರೀ ಮಾತನಾಡಿ, ಸಮಾಜಕ್ಕೆ ಒಳ್ಳೆಯದಾಗಲಿ ಎಂದು ವೀರಶೈವ ಧರ್ಮ ಸ್ಥಾಪನೆ ಆಗಿದೆ. ಆಧುನಿಕ ಕಾಲದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ರಾಜಕೀಯ ಪ್ರವೇಶವಾಗಿದೆ. ರಾಜಕೀಯ ಕ್ಷೇತ್ರ ಕಲುಷಿತವಾಗಿದೆ, ಧಾರ್ಮಿಕ ಕ್ಷೇತ್ರ ಹೊರತಾಗಿಲ್ಲ. ಸಂಸ್ಕಾರ, ಸಂಸ್ಕೃತಿ ಕೊಟ್ಟಿದ್ದು ವೀರಶೈವ ಧರ್ಮ. ವೀರಶೈವ ಸಮುದಾಯದಲ್ಲಿ ನೂರಾರು ಒಳಪಂಗಡಗಳಿವೆ. ಕೆಲ ಒಳಪಂಗಡಗಳಿಗೆ ಮಾತ್ರ ರಾಜಕೀಯದಲ್ಲಿ ಅವಕಾಶ ಸಿಕ್ಕಿವೆ. ಈಗ ಜಾತಿಗೊಂದು ಮಠಗಳಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಪಂಚಪೀಠಗಳು ಧೃತಿಗೆಡಬೇಕಾಗಿಲ್ಲ. ಸಮುದಾಯದ ಬಲವರ್ಧನೆ ಪಂಚಪೀಠಗಳಿಂದ ಮಾತ್ರ ಸಾಧ್ಯ. ವೀರಶೈವ ಲಿಂಗಾಯತ ಮಠಾಧೀಶರನ್ನು ಒಂದೇ ವೇದಿಕೆಗೆ ತರುವ ಸಂಕಲ್ಪ. ಎಲ್ಲಾ ಪೀಠಾಚಾರ್ಯ ಹಾಗೂ ಶಿವಾಚಾರ್ಯ ಒಂದಾದರೆ. ವೀರಶೈವ ಲಿಂಗಾಯತರನ್ನ ಒಂದು ಮಾಡುವುದು ಕಷ್ಟವಲ್ಲ. ವೀರಶೈವ ಬೇರೆ ಲಿಂಗಾಯತವೇ ಬೇರೆ ಎಂಬ ಸಂದೇಶ ಸಾರಿದ್ರು. ವೀರಶೈವ, ಲಿಂಗಾಯತ ಬೇರೆ ಎಂದವರು ಚುನಾವಣೆಯಲ್ಲಿ ಸೋತರು. ಈಗ ಪಂಚಪೀಠಗಳು ಒಂದಾಗಿದೆ. ಇದು ಕ್ಷಣಿಕ ಖುಷಿ ಆಗಬಾರದು ಎಂದು ಹೇಳಿದರು.

ಎರಡು ದಿನಗಳ ಪೀಠಾಚಾರ್ಯ ಮತ್ತು ಶಿವಾಚಾರ್ಯ ಸಮ್ಮೇಳನದಕ್ಕೆ ಪ್ರತಿಕ್ರಿಯೆ ಅದ್ಭುತ. ಸಮಾಜದವರು 16 ವರ್ಷ ಗಳಿಂದ ಪಂಚಪೀಠಗಳು ಒಂದಾಗಬೇಕೆಂದು ಕಾಯುತ್ತಿದ್ದರು. ಅದು ಸಕಾರವಾಗಿದೆ. ಎಲ್ಲ ಸಮುದಾಯದ ಜನಕ್ಕೆ ಆಧ್ಯಾತ್ಮಿಕ ಚಿಂತನೆ ನೀಡಿದಂತಾಗಿದೆ. ನಮ್ಮ ಕರೆಗೆ ಸ್ಪಂದಿಸಿ ಎಲ್ಲ ಪೀಠದವರು ಬಂದಿದ್ದಾರೆ.ವೀರಶೈವ ಲಿಂಗಾಯತ ದೊಡ್ಡ ಸಮಾಜ. ಸಮಾಜಕ್ಕೆ ಒಳ್ಳೆಯದಾಗಲಿ ಎಂದುವೀರಶೈವ ಧರ್ಮ ಸ್ಥಾಪನೆ ಆಗಿದೆ.ಇಂದಿನ ಆಧುನಿಕ ಕಾಲದಲ್ಲಿ ಎಲ್ಲ ಕ್ಷೇತ್ರದಲ್ಲಿ ರಾಜಕೀಯ ಪ್ರವೇಶವಾಗಿದೆ. ರಾಜಕೀಯ ಕ್ಷೇತ್ರ ಕಲುಷಿತ ವಾಗಿದೆ. ಅದಕ್ಕೆ ಧಾರ್ಮಿಕ ಕ್ಷೇತ್ರ ಇದಕ್ಕೆ ಹೊರತಾಗಿಲ್ಲ ಎಂದರು. ಎರಡು ದಿನಗಳ ಪೀಠಾಚಾರ್ಯ ಮತ್ತು ಶಿವಾಚಾರ್ಯ ಸಮ್ಮೇಳನದಕ್ಕೆ ಪ್ರತಿಕ್ರಿಯೆ ಅದ್ಭುತ. ಸಮಾಜದವರು 16 ವರ್ಷ ಗಳಿಂದ ಪಂಚಪೀಠಗಳು ಒಂದಾಗಬೇಕೆಂದು ಕಸಯುತ್ತಿದ್ದರು. ಅದು ಸಕಾರವಾಗಿದೆ. ಎಲ್ಲ ಸಮುದಾಯದ ಜನಕ್ಕೆ ಆಧ್ಯಾತ್ಮಿಕ ಚಿಂತನೆ ನೀಡಿದಂತಾಗಿದೆ. ನಮ್ಮ ಕರೆಗೆ ಸ್ಪಂದಿಸಿ ಎಲ್ಲ ಪೀಠದವರು ಬಂದಿದ್ದಾರೆ.ವೀರಶೈವ ಲಿಂಗಾಯತ ದೊಡ್ಡ ಸಮಾಜ. ಸಮಾಜಕ್ಕೆ ಒಳ್ಳೆಯದಾಗಲಿ ಎಂದುವೀರಶೈವ ಧರ್ಮ ಸ್ಥಾಪನೆ ಆಗಿದೆ.ಇಂದಿನ ಆಧುನಿಕ ಕಾಲದಲ್ಲಿ ಎಲ್ಲ ಕ್ಷೇತ್ರದಲ್ಲಿ ರಾಜಕೀಯ ಪ್ರವೇಶವಾಗಿದೆ. ರಾಜಕೀಯ ಕ್ಷೇತ್ರ ಕಲುಷಿತ ವಾಗಿದೆ. ಅದಕ್ಕೆ ಧಾರ್ಮಿಕ ಕ್ಷೇತ್ರ ಇದಕ್ಕೆ ಹೊರತಾಗಿಲ್ಲ ಎಂದರು.

Leave a Reply

Your email address will not be published. Required fields are marked *

error: Content is protected !!