ಉದಯವಾಹಿನಿ, ಧರ್ಮಸ್ಥಳ :  ತನಿಖೆ ಪಾರದರ್ಶಕವಾಗಿ ನಡೆಯಬೇಕು. ಯಾರೇ ತಪ್ಪು ಮಾಡಿದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಆದರೆ ಧರ್ಮಸ್ಥಳದಂತಹ ಪವಿತ್ರ ಸಂಸ್ಥೆಯ ವಿರುದ್ಧ ಷಡ್ಯಂತರವನ್ನು ನಾವು ಖಂಡಿಸುತ್ತೇವೆ. ಧರ್ಮಸ್ಥಳ ಒಂದು ಸರಕಾರವಲ್ಲ, ಜನರ ಶ್ರದ್ಧಾ ಕೇಂದ್ರ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮೂಲಕ ಸಾವಿರಾರು ಕೆರೆಗಳ ಪುನಶ್ಚೇತನ, ಸಾಮೂಹಿಕ ವಿವಾಹ, ಉಚಿತ ವೈದ್ಯಕೀಯ ಸೇವೆಗಳಂತಹ ಮಹತ್ವದ ಕಾರ್ಯಗಳನ್ನು ಕೈಗೊಂಡಿದೆ. ಇವುಗಳನ್ನು ಕಣ್ತುಂಬಿಕೊಳ್ಳದೆ, ಕೆಲವರು ನಿಂದನೆ ಮಾಡುತ್ತಿರುವುದು ದುಃಖದ ಸಂಗತಿ ಎಂದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶ ನೀಡಿದ್ದು, ಅದನ್ನು ನಾವು ಸ್ವಾಗತಿಸುತ್ತೇವೆ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ) ಹೇಳಿದ್ದಾರೆ.

ಶ್ರದ್ಧೆಗೆ ಆಘಾತ ನೀಡುವ ಪ್ರಯತ್ನಗಳು ಅರ್ಥಹೀನ: ಧರ್ಮಸ್ಥಳವು ಶೈವ, ವೈಷ್ಣವ ಹಾಗೂ ಜೈನ ಪರಂಪರೆಯ ಸಮನ್ವಯದ ಪ್ರತೀಕ. ಇವುಗಳ ನಡುವಣ ಸಮನ್ವಯತೆಯನ್ನು ಸಾಮಾಜಿಕ ಕ್ರಾಂತಿಯಾಗಿ ಪರಿಗಣಿಸಬಹುದು. ನಾನು ಧರ್ಮಸ್ಥಳ ಪರ ನಿಂತಿದ್ದೇನೆ. ಆದರೆ ಯಾರೇ ವ್ಯಕ್ತಿ ತಪ್ಪು ಮಾಡಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಾನೂನು ಎಲ್ಲರಿಗೂ ಸಮಾನವಾಗಿದೆ. ನ್ಯಾಯಮೂರ್ತಿಯೇ ತನಿಖೆಗೆ ಮಾನಿಟರ್ ಆಗಲಿ. ನಾವು ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೇಳಿದರು.

ಧರ್ಮಸ್ಥಳ ವಿರುದ್ಧವಲ್ಲ, ವ್ಯಕ್ತಿಗಳ ವಿರುದ್ಧ ತನಿಖೆ ಆಗಲಿ: ಧರ್ಮಸ್ಥಳವಲ್ಲ, ವ್ಯಕ್ತಿ ವಿರುದ್ಧ ಆರೋಪವಿದೆ ಎಂದು ಹೇಳಬೇಕು. ಒಂದು ವ್ಯಕ್ತಿಯ ತಪ್ಪಿಗಾಗಿ ಧರ್ಮಸ್ಥಳದ ಹೆಸರಿಗೆ ಕಲೆ ಬೀಳಬಾರದು. ನಾನು 397 ದೇವಸ್ಥಾನಗಳ ಪುನರ್‌ನಿರ್ಮಾಣ ಕಾರ್ಯ ಮಾಡಿದ್ದೇನೆ. ಅದರಲ್ಲಿ 37 ದೇವಾಲಯಗಳು ಚಿಕ್ಕಮಗಳೂರಿನಲ್ಲಿ.ನಾವು ಯಾರಾದ್ರೂ ತಪ್ಪು ಮಾಡಿದ್ರೆ, ಮಂಜುನಾಥ ಸ್ಚಾಮಿ ಮೇಲೆ ಆಣೆ ಮಾಡು ಅಂತೀವಿ. ಅಂತಹ ಶ್ರದ್ದೆಗೆ ಅಪನಂಬಿಕೆ ಮಾಡಬಾರದು. ಧರ್ಮಸ್ಥಳ ಎಂದಿಗೂ ಶಿಕ್ಷಣವನ್ನು ವ್ಯಾಪಾರ ಎಂದು ಪರಿಗಣಿಸಿಲ್ಲ. ಎಜುಕೇಶನ್ ಇಸ್ ಬ್ಯುಸಿನೆಸ್ ಅಂತ ಕೆಲವರು ಹೇಳ್ತಾರೆ. ಆದ್ರೆ ಧರ್ಮಸ್ಥಳ ಎಂದೂ ಹಾಗೆ ಹೇಳಿಲ್ಲ. ಅದಕ್ಕೆ ಅದರ ಫೀಸ್ ಸ್ಟ್ರಕ್ಚರ್ ನೋಡಿ. ನಾನು ಇದನ್ನ ಹೇಳಿದ್ದಕ್ಕೆ ಸಿಟಿ‌ರವಿ ಅಲ್ಲ, ಓಟಿ‌ ರವಿ ಅಂತ ಕುಡುಕನ್ನ ಮಾಡಿದ್ರು. 2019ರಲ್ಲಿ ನನ್ನ ಕಾರು ಅಪಘಾತವಾಗಿತ್ತು. ಆದರೆ ಕೆಲವು ಮಾಧ್ಯಮಗಳು ಕೇವಲ ಶಂಕೆ ಆಧರಿಸಿ ನನ್ನ ವಿರುದ್ಧ ಅಪಪ್ರಚಾರ ನಡೆಸಿದವು. ಕುಡಿದು ಮಾತನಾಡಿದಂತೆ ಹೊರತೆಗೆದರು. ಇಂದಿನ ಸಾಮಾಜಿಕ ಮಾಧ್ಯಮಗಳಲ್ಲಿ ವಿಚಾರ ಮಟ್ಟದ ಪ್ರಶ್ನೆಗಳಿಗಿಂತ ವ್ಯಕ್ತಿತ್ವದ ನಿಂದನೆ ಹೆಚ್ಚು ಇದೆ, ಇದು ತೊಂದರೆಕಾರಿ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!