ಉದಯವಾಹಿನಿ, ಬೆಂಗಳೂರು: ಯುಎಸ್‌‍ಡಿಟಿ ಡಿಜಿಟಲ್‌ ಕರೆನ್ಸಿಗೆ ಪರಿವರ್ತಿಸಿ ಆರ್‌ಟಿಜಿಎಸ್‌‍ ಮೂಲಕ ಜಿಎಸ್‌‍ಟಿ ಸಮೇತ ದ್ವಿಗುಣಗೊಳಿಸಿ, ಹಣ ಹಿಂದಿರುಗಿಸುವುದಾಗಿ ಶ್ರೀಮಂತರನ್ನು ನಂಬಿಸಿ ಹಣ ತರಿಸಿಕೊಂಡು ಸಹಚರರಿಂದಲೇ ದರೋಡೆ ಮಾಡಿಸಿದಂತೆ ನಟಿಸಿ, 2 ಕೋಟಿ ಹಣ ದೋಚಿದ್ದ 15 ಮಂದಿಯನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿ ನಗದು ಸೇರಿದಂತೆ 1.40 ಕೋಟಿ ಮೌಲ್ಯದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.ರರು ಪೊಲೀಸರಿಗೆ ತಿಳಿಸಿದ್ದಾರೆ. ಆರೋಪಿಗಳಿಂದ 1.11 ಕೋಟಿ ರೂ. ನಗದು,ಕೃತ್ಯಕ್ಕೆ ಬಳಸಿದ್ದ 4 ಕಾರುಗಳು, 4 ದ್ವಿಚಕ್ರ ವಾಹನಗಳು, 2 ಆಟೋಗಳು, 8 ಮೊಬೈಲ್‌ ಫೋನುಗಳು ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಶ್ರೀಮಂತರ ಬಳಿಯಿಂದ ಹಣವನ್ನು ಪಡೆದು ಅದನ್ನು ಯುಎಸ್‌‍ಡಿಟಿ ಡಿಜಿಟಲ್‌ ಕರೆನ್ಸಿಗೆ ಪರಿವರ್ತಿಸಿ, ಆ ಹಣವನ್ನು ಆರ್‌ಟಿಜಿಎಸ್‌‍ ಪ್ರೀಮಿಯಂ ಮೂಲಕ ಜಿಎಸ್‌‍ಟಿ ಸಮೇತ ದ್ವಿಗುಣಗೊಳಿಸಿ ಹಿಂದಿರುಗಿಸುವುದಾಗಿ ನಂಬಿಸಿ, ಹಣ ತರಿಸಿಕೊಳ್ಳುತ್ತಿದ್ದ ಗ್ಯಾಂಗ್‌, ನಂತರ ಆ ಹಣವನ್ನು ಅವರ ಸಹಚರರಿಂದಲೇ ದರೋಡೆ ಮಾಡಿಸಿದಂತೆ ನಟಿಸಿ ಮೋಸದಿಂದ ಹಣ ದೋಚುತ್ತಿತ್ತು.

ಎಂಎಸ್‌‍ ಪಾಳ್ಯ ಸರ್ಕಲ್‌ನಲ್ಲಿರುವ ಮಳಿಗೆಯೊಂದರ ಮಾಲೀಕರಿಂದ 2 ಕೋಟಿ ಹಣ ದರೋಡೆ ಮಾಡಿದ್ದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಹೆಗಡೆ ನಗರದ ಜಾಮೀಯಾ ಮಸೀದಿ ಬಳಿ ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ತಮ ಜೊತೆ 17 ಮಂದಿ ಸಹಚರರು ಭಾಗಿಯಾಗಿರುವುದಾಗಿ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!