ಉದಯವಾಹಿನಿ,ಲಂಡನ್: ಸೈಬರ್ ದಾಳಿಯಿಂದ 158 ವರ್ಷದ ಯುಕೆಯ ಹಳೆಯ ಸಾರಿಗೆ ಕಂಪನಿ ಬಂದ್ ಆಗಿ 700 ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.ಕೆಎನ್‌ಪಿಯ ಲಾಜಿಸ್ಟಿಕ್ಸ್ ಕಂಪನಿ 500 ಲಾರಿಗಳನ್ನು ನಿರ್ವಹಣೆ ಮಾಡುತ್ತಿತ್ತು. ಹ್ಯಾಕರ್‌ಗಳು ಉದ್ಯೋಗಿಯೊಬ್ಬನ ಪಾಸ್‌ವರ್ಡ್ ಊಹಿಸಿ ಸೈಟ್ ಪ್ರವೇಶಿಸಿದ್ದಾರೆ. ನಂತರ ರಾನ್ಸಮ್‌ವೇರ್ ಮಾಲ್ವೇರ್ ಕಳುಹಿಸಿ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಿ ಆಂತರಿಕ ವ್ಯವಸ್ಥೆಗಳನ್ನು ಲಾಕ್ ಮಾಡಿದ್ದಾರೆ ಎಂದು ವರದಿಯಾಗಿದೆ.
ಹ್ಯಾಕ್ ಮಾಡಿದ ಬಳಿಕ ಉದ್ಯೋಗಿಗಳಿಗೆ ವೆಬ್‌ಸೈಟ್ ಪ್ರವೇಶ ಮಾಡಲು ಸಾಧ್ಯವಾಗಲಿಲ್ಲ. ಹ್ಯಾಕರ್‌ಗಳು 5 ಮಿಲಿಯನ್ ಪೌಂಡ್‌ಗೆ (ಅಂದಾಜು 58. 40 ಕೋಟಿ ರೂ) ಬೇಡಿಕೆ ಇಟ್ಟಿದ್ದರು. ಆದರೆ ಇಷ್ಟೊಂದು ಮೊತ್ತವನ್ನು ಪಾವತಿ ಮಾಡಲು ಕಂಪನಿಗೆ ಸಾಧ್ಯವಾಗಲಿಲ್ಲ. ಇದರಿಂದ ಸಂಪೂರ್ಣ ಡೇಟಾ ನಷ್ಟಕ್ಕೆ ಕಾರಣವಾಯಿತು. ಅಂತಿಮವಾಗಿ ಕಂಪನಿಯ ಪತನಕ್ಕೆ ಕಾರಣವಾಯಿತು.
