ಉದಯವಾಹಿನಿ, ಮಧ್ಯಪ್ರಾಚ್ಯದಲ್ಲಿ ಇರಾನ್​ ಯುದ್ಧದ ಸಂಘರ್ಷ ಮುಂದುವರಿದಿರುವ ನಡುವೆಯೇ ಪಕ್ಕದ ಮುಸ್ಲಿಂ ರಾಷ್ಟ್ರ ಟರ್ಕಿ ಕೂಡ ಭೂಕಂಪದಿಂದ ನಡುಗಿದೆ. ಜಾವ ಟೋಕಟ್ ಪ್ರಾಂತ್ಯದ ನಿಕ್ಸರ್ ಪ್ರದೇಶದ ಸಮೀಪ 5.5 ತೀವ್ರತೆಯ ಭೂಕಂಪ ಸಂಭವಿಸಿದ್ದು, ಹಲವಾರು ನಗರಗಳಲ್ಲಿ ಕಂಪನ ಅನುಭವವಾಗಿದೆ. ರಾತ್ರಿ ವೇಳೆ ಭೂಮಿ ಕಂಪಿಸಿದ ಪರಿಣಾಮ ಜನರು ಭಯಭೀತರಾಗಿ ಮನೆಗಳಿಂದ ಹೊರಬಂದು ಬೀದಿಗಳಲ್ಲಿ ಆಶ್ರಯ ಪಡೆದಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ದೊಡ್ಡ ಹಾನಿ ಸಂಭವಿಸಿಲ್ಲದಿದ್ದರೂ, ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಮಾಹಿತಿ ಪ್ರಕಾರ!
ಮಧ್ಯ ಟರ್ಕಿಯಲ್ಲಿ ಶುಕ್ರವಾರ 5.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯೂರೋಪಿಯನ್​ ಮೆಡಿಟರೇನಿಯನ್ ಸಿಸ್ಮೊಲಾಜಿಕಲ್ ಸೆಂಟರ್​ ತಿಳಿಸಿದೆ. ಸಂಸ್ಥೆ ಪ್ರಕಾರ ಭೂಕಂಪವು ಭೂಮಿಯಿಂದ ಸುಮಾರು 35 ಕಿಲೋಮೀಟರ್ ಆಳದಲ್ಲಿ ಉಂಟಾಗಿದೆ. ಭೂಕಂಪದ ಕಂಪನ ಅನುಭವವಾದ ತಕ್ಷಣ ಹಲವರು ಭಯದಿಂದ ತಮ್ಮ ಮನೆಗಳಿಂದ ಹೊರಬಂದು ಬೀದಿಗಳಲ್ಲಿ ನಿಂತರು. ರಾತ್ರಿ ಅಥವಾ ಬೆಳಗಿನ ಸಮಯದಲ್ಲಿ ಭೂಕಂಪ ಸಂಭವಿಸಿದ ಕಾರಣ ಜನರಲ್ಲಿ ಕೆಲಕಾಲ ಆತಂಕ ಉಂಟಾಯಿತು. ಆದರೆ ಅಧಿಕಾರಿಗಳ ಪ್ರಾಥಮಿಕ ಮಾಹಿತಿಯ ಪ್ರಕಾರ ಈ ಭೂಕಂಪದಿಂದ ಯಾವುದೇ ದೊಡ್ಡ ಹಾನಿ ಅಥವಾ ಪ್ರಾಣಾಪಾಯ ಸಂಭವಿಸಿಲ್ಲ. ಪರಿಸ್ಥಿತಿ ಈಗ ಸಾಮಾನ್ಯವಾಗಿದ್ದು, ಅಧಿಕಾರಿಗಳು ಮುಂದಿನ ಬೆಳವಣಿಗೆಗಳ ಮೇಲೆ ನಿಗಾ ವಹಿಸುತ್ತಿದ್ದಾರೆ.

5.5 ತೀವ್ರತೆಯ ಭೂಕಂಪದ ಕೇಂದ್ರಬಿಂದು ಟೋಕಟ್ ಪ್ರಾಂತ್ಯದ ನಿಕ್ಸರ್ ನಗರದಲ್ಲಿತ್ತು. ಈ ಭೂಕಂಪವು ಭೂಮಿಯಿಂದ ಸುಮಾರು 6.4 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ. ಸ್ಥಳೀಯ ಸಮಯ ಬೆಳಗಿನ ಜಾವ ಸುಮಾರು 3:35ಕ್ಕೆ ಕಂಪನ ಸಂಭವಿಸಿದ್ದು, ಟೋಕಟ್ ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರಾಂತ್ಯಗಳಲ್ಲಿ ಭೂಕಂಪದ ಅನುಭವವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕಂಪದಿಂದ ಕೆಲಕಾಲ ಜನರಲ್ಲಿ ಆತಂಕ ಉಂಟಾದರೂ, ಪ್ರಾಥಮಿಕ ವರದಿಗಳ ಪ್ರಕಾರ ಯಾವುದೇ ದೊಡ್ಡ ಹಾನಿ ಅಥವಾ “ಪ್ರತಿಕೂಲ ಘಟನೆಗಳು” ಸಂಭವಿಸಿಲ್ಲ ಎಂದು AFAD ಸ್ಪಷ್ಟಪಡಿಸಿದೆ.

Leave a Reply

Your email address will not be published. Required fields are marked *

error: Content is protected !!