ಉದಯವಾಹಿನಿ, ಜೈಪುರ: ಮರುಭೂಮಿ ನಾಡು ರಾಜಸ್ಥಾನ ರಾಜ್ಯದ ರಾಜಧಾನಿ ಜೈಪುರದ ಜೋತ್ವಾರಾ ಪೊಲೀಸ್ ಠಾಣೆಯ ಸಿಬ್ಬಂದಿ ಎದುರಿಗೆ ಪತಿರಾಯನೊಬ್ಬ ಗೋಳಿಡುತ್ತಿದ್ದಾನೆ. 48 ವರ್ಷ ವಯಸ್ಸಿನ ಈ ವ್ಯಕ್ತಿಗೆ ತನ್ನ ಹೆಂಡತಿಯ ಕಾಟ ತಾಳಲಾಗುತ್ತಿಲ್ಲವಂತೆ. ನನ್ನ ಹೆಂಡ್ತಿ ನನಗೆ ಸುಖಾಸುಮ್ಮನೆ ಹೊಡೆಯುತ್ತಾಳೆ, ಬಾಯಿಗೆ ಬಂದಂತೆ ಬೈತಾಳೆ ಎಂದು ಈತ ಪೊಲೀಸರಿಗೆ ದೂರು ನೀಡಿದ್ದಾನೆ. ನನಗೆ ಹಾಗೂ ನನ್ನ ತಂದೆ ತಾಯಿಗೆ ನನ್ನ ಹೆಂಡ್ತಿ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸುತ್ತಾಳೆ. ನನಗೆ ಆಕೆಯ ಹೊಡೆತದಿಂದ ಮೈ ತುಂಬಾ ಗಾಯಗಳು ಆಗಿವೆ ಎಂದು ಪತಿರಾಯ ಪೊಲೀಸರಿಗೆ ದೂರು ನೀಡಿದ್ದ.

ಈ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಪೊಲೀಸರಿಗೆ ದೂರು ನೀಡಿದ ವ್ಯಕ್ತಿಯ ಹೆಸರು ವಿಕ್ರಂ. ಭಾನುವಾರ ರಾತ್ರಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಈತ ತನ್ನ ಪತ್ನಿಯ ದೌರ್ಜನ್ಯವನ್ನು ವಿವರಿಸಿದ. ಈತನ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. 45 ವರ್ಷ ವಯಸ್ಸಿನ ರಚನಾ ಎಂಬ ಪತ್ನಿಯೇ ಈ ಪ್ರಕರಣದ ಆರೋಪಿ. ಇವರಿಬ್ಬರೂ 24 ವರ್ಷಗಳ ಹಿಂದೆ ವಿವಾಹವಾಗಿದ್ದರು. ಇತ್ತೀಚೆಗೆ ಸಣ್ಣ ಸಣ್ಣ ವಿಚಾರಕ್ಕೂ ನನ್ನ ಪತ್ನಿ ರೇಗುತ್ತಾಳೆ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾಳೆ. ಕಪಾಳಕ್ಕೆ ಹೊಡೆಯುತ್ತಾಳೆ. ದೊಣ್ಣೆಯಿಂದ ಥಳಿಸುತ್ತಾಳೆ, ಮನೆಯಿಂದ ಆಚೆಗೂ ತಳ್ಳುತ್ತಾಳೆ ಎಂದು ಪತಿರಾಯ ವಿಕ್ರಂ ದೂರು ನೀಡಿದ್ದಾನೆ.

Leave a Reply

Your email address will not be published. Required fields are marked *

error: Content is protected !!